ಐಪಿಎಲ್ ನ ಪ್ರತಿಯೊಂದು ಪಂದ್ಯದಲ್ಲಿ ಕೂಡ ದಾಖಲೆಗಳು ಮೂಡಿ ಬರುತ್ತಿವೆ. ಈಗ ರಿಷಬ್ ಪಂತ್ ಕಡಿಮೆ ಬೌಲ್ ಎದುರಿಸಿ 3 ಸಾವಿರ ರನ್ ಗಳಿಸಿದ ಮೊದಲ ಆಟಗಾರರಾಗಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದಲ್ಲಿ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಂತ್ 24 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವನಿಂದ 44 ರನ್ ಗಳಿಸಿದ್ದರು. ಈ ಮೂಲಕ ಅವರು ಐಪಿಎಲ್ ನಲ್ಲಿ ಕಡಿಮೆ ಬೌಲ್ ಎದುರಿಸಿ 3 ಸಾವಿರ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.
ಹಿಂದೆ ಈ ದಾಖಲೆ ಯೂಸುಫ್ ಪಠಾಣ್ ಹೆಸರಿನಲ್ಲಿತ್ತು. ಪಠಾಣ್ ಕೇವಲ 2082 ಎಸೆತಗಳಲ್ಲಿ 3 ಸಾವಿರ ರನ್ ಪೂರೈಸಿ ದಾಖಲೆ ಬರೆದಿದ್ದರು. ಇದೀಗ ಪಂತ್ 2028 ಎಸೆತಗಳನ್ನು ಎದುರಿಸಿ 3 ಸಾವಿರ ರನ್ ಗಳಿಸಿದ್ದಾರೆ. ಅಲ್ಲದೇ, ಡೆಲ್ಲಿ ಕ್ಯಾಪಿಟಲ್ಸ್ ಪರ 3 ಸಾವಿರ ರನ್ ಕಲೆ ಹಾಕಿದ ಮೊದಲ ಬ್ಯಾಟರ್ ಕೂಡ ಆಗಿದ್ದಾರೆ.