ವ್ಹಾ… ಹೊಸ ಸಾಧನೆಯತ್ತ ಕಿಚ್ಚನ ‘ಫ್ಯಾಂಟಮ್’… ಈ ಸಾಧನೆಯಲ್ಲೇ ಭಾರತದ 2ನೇ ಸಿನಿಮಾ…!
ನಿಮಗೆ ಗೊತ್ತಿರಬಹುದು ಭಾರತೀಯ ಸಿನಿಮಾ ಇಂಡಸ್ಟ್ರಿಯಲ್ಲೇ ದೊಡ್ಡ ಮಟ್ಟದ ಸಾಧನೆ ಮಾಡಿ ಸೆನ್ಸೇಷನ್ ಸೃಷ್ಟಿ ಮಾಡಿದ್ದ ಏಕೈಕ ಸಿನಿಮಾ ಅಂದ್ರೆ ಅದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘2.0’. ಇಲ್ಲಿವಯರೆಗೂ ಯಾವು ಸಿನಿಮಾಗಳು ಕೂಡ ಈ ರೆಕಾರ್ಡ್ ಹತ್ತಿರಕ್ಕೂ ಸುಳಿದಿರಲಿಲ್ಲ. ಇದೀಗ ಈ ಸಾಧನೆಯಲ್ಲಿ ಭಾರತದ 2ನೇ ಸಿನಿಮಾ ಸ್ಯಾಂಡಲ್ ವುಡ್ ನ ಮೊದಲನೇ ಸಿನಿಮಾವಾಗಿ ದೊಡ್ಡ ಮಟ್ಟದಲ್ಲೇ ಹವಾ ಕ್ರಿಯೇಟ್ ಮಾಡಲು ಹೊರಟಿದೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹುನಿರೀಕ್ಷಿತ ಫ್ಯಾಟಂ ಸಿನಿಮಾ… ಈ ಸುದ್ದಿ ಕೇಳ್ತಿದ್ದಂತೆ ಕಿಚ್ಚನ ಫ್ಯಾನ್ಸ್ ಹಾರ್ಟ್ ಬೀಟ್ಸ್ ಜೋರಾಗಿದೆ. ಕನ್ನಡ ಸಿನಿಪ್ರಿಯರು ಕಿಚ್ಚನ ಅಭಿಮಾನಿಗಳು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ.
ಬದುಕಿದ್ದಾಗ ಮಾತಾಡಿದ್ರೆ ಗಂಡಸ್ತನ : ತೆಲುಗು ನಟನಿಗೆ ಕಿಚ್ಚ ವಾರ್ನಿಂಗ್
ಅಷ್ಟಕ್ಕೂ ಈ ಸಾಧನೆ ಏನು… ಅಂದ್ಹಾಗೆ ದುಬೈನಲ್ಲಿರುವ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕಿಚ್ಚನ ಅಭಿನಯದ ಫ್ಯಾಂಟಮ್ ಸಿನಿಮಾದ ಆಡೀಯೋ ಲಾಂಚ್ ಮಾಡಲಿದೆಯಂತೆ ಚಿತ್ರತಂಡ. ಎಸ್ ಈ ಹಿಂದೆ ಈ ಸಾಧನೆ ಮಾಡಿದ್ದ ಏಕೈಕ ಸಿನಿಮಾ 0.2 ಸಿನಿಮಾವಾಗಿತ್ತು. ಇದೀಗ ಇದೇ ಹಾದಿ ಹಿಡಿರುವ ಚಿತ್ರತಂಡ ‘ದಿ ವರ್ಡ್ ಆಫ ಫ್ಯಾಂಟಮ್ ‘ ಸಿನಿಮಾವನ್ನ ಎಕ್ಸ್ಟ್ರೀಮ್ ಲೆವೆಲ್ ಕೊಂಡೊಯ್ಯೋ ಮಾಸ್ಟರ್ ಪ್ಲಾನ್ ಮಾಡಿದೆ. ಅನೂಪ್ ಭಂಡಾರಿ ಅವರ ಸಾರಥ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಈ ಚಿತ್ರ ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ.
ಒನ್ ಆಫ್ ದಿ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕೂಡ ಹೌದು. ಸದ್ಯ ಹೈದ್ರಾಬಾದ್ ನಿಂದ ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿರೋ ಟೀಂ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಸಖತ್ ಬ್ಯುಸಿಯಾಗಿದೆ. ಇನ್ನೇನು ಕೊನೆಯ ಹಂತದ ಚಿತ್ರೀಕರಣವೂ ಶೀಘ್ರವೇ ಮುಕ್ತಾಯವಾಗಲಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕೈಗೆತ್ತಿಕೊಳ್ಳಲಿದೆ. ಈ ನಡುವೆ ಸಿನಿಮಾದ ಹೊಸ ಹೊಸ ಅಪಡೇಟ್ ಗಳು ಸಿನಿಪ್ರಿಯರ ಕಾತರತೆಯನ್ನ ಗಗನಕ್ಕೇರಿಸುತ್ತಲೇ ಇದೆ. ಅಂದ್ಹಾಗೆ ಶೂಟಿಂಗ್ ಮುಕ್ತಾಯವಾಗ್ತಿದ್ದಂತೆ ಸಿನಿಮಾದ ಆಡಿಯೋವನ್ನ ಬುರ್ಜ್ ಖಲೀಫಾದಲ್ಲಿ ಲಾಂಚ್ ಮಾಡಲು ಸಿನಿತಂಡ ಪ್ಲಾನ್ ,ಮಾಡಿಕೊಂಡಿದೆ ಎಂಬ ಸುದ್ದಿ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಸಿನಿಮಾಗೆ ಜಾಕ್ ಮಂಜು ಅವರ ಜೊತೆಗೆ ಅಲಂಕಾರ್ ಪಾಂಡಿಯನ್ ಬಂಡವಾಳ ಹೂಡಿದ್ದಾರೆ. ಅಂದ್ಹಾಗೆ ಈ ಅಲಂಕಾರ್ ಅವರು ದುಬೈನಲ್ಲೇ ಸೆಟಲ್ ಆಗಿದ್ದಾರೆ. ಹೀಗಾಗಿ ಅವರ ಸಾರಥ್ಯದಲ್ಲೇ ಸಿನಿಮಾವನ್ನ ವಿಶ್ವದ ಅತಿ ಎತ್ತರದ ಕಟ್ಟದಲ್ಲಿ ಆಡಿಯೋ ಲಾಂಚ್ ಮಾಡೋ ಪ್ಲಾನ್ ನಡೆದಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel