ಪ್ಯಾರಾಲಿಂಪಿಕ್ಸ್ ನಲ್ಲಿ ಮುಂದುವರೆದ ಪದಕ ಬೇಟೆ : ಭಾರತಕ್ಕೆ ಮತ್ತೊಂದು ಚಿನ್ನ Paralympics saaksha tv
ಜಪಾನ್ : ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದ್ದು, ಭಾರತಕ್ಕೆ ಮತ್ತೊಂದು ಚಿನ್ನದ ಪದಕ ದಕ್ಕಿದೆ.
ಹೌದು..! ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್3 ವಿಭಾಗದಲ್ಲಿ ಪ್ರಮೋದ್ ಭಗತ್ ಬಂಗಾರಕ್ಕೆ ಮುತ್ತಿಟ್ಟಿದ್ದಾರೆ.
ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಎಸ್ ಎಲ್3 ವಿಭಾಗದಲ್ಲಿ ಪ್ರಮೋದ್, ಗ್ರೇಟ್ ಬ್ರಿಟನ್ ನ ಡೇನಿಯಲ್ ಬೆಥೆಲ್ ವಿರುದ್ಧ 21-14, 21-17ರ ನೇರ ಗೇಮ್ ಗಳಿಂದ ಗೆಲುವು ಸಾಧಿಸಿದರು.
ಈ ಪಂದ್ಯಕ್ಕೂ ಸೆಮಿ ಫೈನಲ್ ನಲ್ಲಿ ಪ್ರಮೋದ್, ಜಪಾನ್ ನ ಡೈಸೂಕ್ ಫುಜಿಹಾರ್ ವಿರುದ್ಧ ಗೆಲುವು ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದ್ದರು.