Bengaluru : ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರಿಕೆಟ್ ಪಂದ್ಯಾವಳಿ
ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.
ಪರಪ್ಪನ ಆಗ್ರಹಾರ ಸಿಬ್ಬಂದಿ ಹಾಗೂ ಕೈದಿಗಳ ನಡುವೆ ಸೌಹಾರ್ದದ ಕ್ರಿಕೆಟ್ ಪಂದ್ಯ ನಡೆದಿದೆ.
ಕ್ರೀಡೆಯಿಂದ ಆರೋಗ್ಯ ಆರೋಗ್ಯದಿಂದ ಉತ್ತಮ ಆಯುಷ್ಯ ಎಂಬ ಘೋಷಣೆಯಡಿ ಕ್ರಿಕೆಟ್ ಪಂದ್ಯ ಆಯೋಜನೆ ಮಾಡಲಾಗಿತ್ತು.
ಪಂದ್ಯದಲ್ಲಿ ಪರಪ್ಪನ ಆಗ್ರಹಾರ ಜೈಲಿನ ಸಿಬ್ಬಂದಿಗಳ ತಂಡ ಗೆದ್ದಿದೆ. ಮನರಂಜನೆ ಹಾಗೂ ಕ್ರೀಡಾಸ್ಪೂರ್ತಿ ಬೆಳೆಸಲು ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಪಂದ್ಯ ನಡೆದಿದೆ.