ಮುಂಬಯಿ: ಡ್ರಗ್ಸ್ ಗಾಗಿ ಮಕ್ಕಳನ್ನೇ ಮಾರಾಟ ಮಾಡಿರುವ ಅಮಾನವೀಯ ಘಟನೆಯೊಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಸೇರಿದಂತೆ ಮೂವರನ್ನು ಮುಂಬಯಿ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಶಬ್ಬೀರ್, ಸಾನಿಯಾ ಮತ್ತು ಶಕೀಲ್ ಮಕ್ರಾನಿ ಬಂಧಿತ ಆರೋಪಿಗಳು ಎನ್ನಲಾಗಿದ್ದು, ಮಾರಾಟದಿಂದ ಕಮಿಷನ್ ಪಡೆದ ಆರೋಪಿ ಉಷಾ ರಾಥೋಥ್ ಎಂಬ ಮಹಿಳೆಯನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಅಂಧೇರಿಯಲ್ಲಿ ಒಂದು ತಿಂಗಳ ಒಂದು ಮಗು ರಕ್ಷಣೆ ಮಾಡಿದ್ದು, 2 ವರ್ಷದ ಮತ್ತೊಂದು ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮಾದಕ ವ್ಯಸನಕ್ಕೆ ಗುರಿಯಾಗಿದ್ದ ದಂಪತಿ, ತಮ್ಮ ಮಕ್ಕಳನ್ನೇ ಮಾರಿ ಹಣ ಸಂಪಾದಿಸಿದ್ದಾರೆ. ಗಂಡು ಮಗುವನ್ನು 60 ಸಾವಿರ ರೂ.ಗೆ, ಒಂದು ತಿಂಗಳ ಹೆಣ್ಣು ಮಗುವನ್ನು 14 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.