Rajdhani Express : ರೈಲ್ವೆ ಇಲಾಖೆ ನೀಡಿದ ಆಮ್ಲೆಟ್ ನಲ್ಲಿ ಜಿರಲೆ ಪತ್ತೆ…
ರಾಜಧಾನಿ ಎಕ್ಸಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ ವ್ಯಕ್ತಿಗೆ ಭಾರತೀಯ ರೈಲ್ವೆ ಇಲಾಖೆ ನೀಡಿದ ಊಟದಲ್ಲಿ ಜಿರಲೆ ಕಂಡು ಬಂದಿದೆ. ಪ್ಯಾಸೆಂಜರ್ ಜಿರಲೆ ಪೋಟೋವನ್ನ ಟ್ವೀಟರ್ ನಲ್ಲಿ ಶೇರ್ ಮಾಡಿ ಭಾರತೀಯ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.
ಮಗುವಿಗಾಗಿ ಹೆಚ್ಚುವರಿ ಪುಡ್ ಆರ್ಡರ್ ಮಾಡಿದಾಗ ಆಮ್ಲೆಟ್ ನಲ್ಲಿ ಜಿರಲೆ ಪತ್ತೆಯಾಗಿದೆ. 16 ಡಿಸೆಂಬರ್ 2022 ರಂದು ನಾವು ದೆಹಲಿ ಮುಂಬೈ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ತನ್ನ ಎರಡು ವರ್ಷದ ಮಗಳಿಗಾಗಿ ಹೆಚ್ಚುವರು ಆಮ್ಲೇಟ್ ಆರ್ಡರ್ ಮಾಡಿದ್ದೆವು. ಆದರೇ ರೈಲ್ವೇ ಇಲಾಖೆ ನೀಡಿದ ಆಮ್ಲೆಟ್ ನಲ್ಲಿ ಜಿರಳೆ ಪತ್ತೆಯಾಗಿದೆ . ನನ್ನ ಮಗಳಿಗೆ ಏನಾದರೂ ಸಂಭವಿಸಿದರೇ ಯಾರು ಜವಬ್ದಾರಿ ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.
ದೂರಿಗೆ ಪ್ರತಿಕ್ರಿಯಿಸಿದ ರೈಲ್ವೇ ಪ್ರಯಾಣಿಕರಿಗೆ ಆನ್‌ಲೈನ್ ಬೆಂಬಲ ಸೇವೆ – “ಅನಾನೂಕೂಲತೆಗೆ ವಿಷಾದ ವ್ಯಕ್ತಪಡಿಸಿದೆ. ಸರ್, ದಯವಿಟ್ಟು ನೇರ ಸಂದೇಶದಲ್ಲಿ (DM) PNR ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳಿ” ಎಂದು ಹೇಳಿದೆ.
ನಂತರ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮವನ್ನ ತೆಗೆದುಕೊಳ್ಳಲಾಗಿದೆ.
- ಮೂಲಗಳ ಪ್ರಕಾರ, ನಿರ್ಲಕ್ಷ್ಯತೆ ಕಾರಣದಿಂದಾಗಿ ಸಬ್ಬಂಧ ಪಟ್ಟ ಅಡುಗೆಯವನ ಪರವಾನಿಗೆಯನ್ನ ರದ್ದು ಮಾಡಲಾಗಿದೆ.
- ಹೆಚ್ಚುವರಿಯಾಗಿ, ಸೇವೆ ಒದಗಿಸುವವರು ಮಾಡಿದ ಲೋಪಕ್ಕಾಗಿ ರೂ 1 ಲಕ್ಷ ದಂಡವನ್ನ ವಿಧಿಸಲಾಗಿದೆ.
- ಮತ್ತು ಹೆಚ್ಚಿನ ಗಮನ ಹರಿಸುವಂತೆ ಪ್ಯಾಂಟ್ರಿ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
Passenger finds cockroach in omlette served on Rajdhani Express, cook disengaged








