Patan Besharam Controvercy : ಸಾಂಗ್ ಡಿಲೀಟ್ ಮಾಡೋಕೆ ಚಿತ್ರತಂಡ ಪ್ಲಾನ್..!!??
ಮೊದಲೇ ಬಾಲಿವುಡ್ ಬಾಯ್ಕಾಟ್ ಸುಳಿಯಲ್ಲಿ ಸಿಲುಕಿದೆ..
ಅಕ್ಷಯ್ ಕುಮಾರ್ , ಅಜಯ್ ದೇವಗನ್ , ಅಮಿರ್ ಖಾನ್.. ಯಾವ ಸ್ಟಾರ್ ನಟರ ಸಿನಿಮಾಗಳು ಕೂಡ ಹಿಟ್ ಆಗದೇ ಮಕಾಡೆ ಮಲಗುತ್ತಿವೆ.. ಅದ್ರಲ್ಲೂ ಬಾಯ್ಕಾಟ್ ಗೆ ಟಾರ್ಗೆಟ್ ಆದ ಸಿನಿಮಾಗಳು ಯಾವ ರೀತಿ ಹೇಳ ಹೆಸರಿಲ್ಲದಂತೆ ಸೋತು ಸುಣ್ಣವಾಗಿವೆ ಮತ್ತೆ ನೆನಪು ಮಾಡುವ ಅವಶ್ಯಕತೆಯೇ ಇಲ್ಲ…
ಅವರ ಅತೀವ ಪಾಶ್ಚಿಮಾತ್ಯತೆ , ಹಿಂದೂ ಧರ್ಮದ ಬಗ್ಗೆ ಕೆಲವೊಮ್ಮೆ ಅವಹೇಳದಂತೆ ತೋರಿಸುವ ದೃಶ್ಯಗಳು , ನೆಪೋಟಿಸಮ್ , ಬಾಲಿವುಡ್ ಮಾಫಿಯಾ,, ಕಲೆವೊಮ್ಜಮೆ ಅಶ್ಲೀಲ ಎನಿಸುವ ದೃಶ್ಯ , ಕೆಟ್ಟ ಕಾನ್ಸೆಪ್ಟ್ , ಅಹಂನಲ್ಲಿ ಸ್ಟಾರ್ ಗಳು ನೀಡಿರುವಂತಹ ಹೇಳಿಕೆಗಳು , ಹಾಲಿವುಡ್ , ಸೌತ್ ಸಿನಿಮಾಗಳ ಕಥೆಗಳನ್ನೇ ಕದ್ದು ಸಿನಿಮಾ ಮಾಡುವುದು ಇನ್ನೂ ಒಂದಷ್ಟು ಕಾರಣಗಳಿಂದ ಬಾಲಿವುಡ್ ಅಧಪಥನದತ್ತ ಸಾಗ್ತಿದೆ..
ಆದ್ರೆ ಇಷ್ಟಾದ್ರೂ ಬಾಲಿವುಡ್ ಮಂದಿಗೆ ಬುದ್ದಿ ಮಾತ್ರ ಬಂದಿಲ್ಲ.. ಏನಾದ್ರೂ ಆಗಲಿ ನಾವ್ ಮಾಡಿದ್ದೇ ಮಾಡೋದು ಅನ್ನೋ ಜಾಯಮಾನಕ್ಕೆ ಬಂದ್ಬಿಟ್ಟಿದ್ದಾರೆ..
ಅಂದ್ಹಾಗೆ ಇತ್ತೀಚೆಗೆ ಶಾರುಖ್ ಖಾನ್ ನಟನೆಯ ಬಹುನಿರೀಕ್ಷೆಯ ಪಠಾಣ್ ಸಿನಿಮಾದ ಬೇಶರಂ ಹಾಡು ರಿಲೀಸ್ ಆಗಿದೆ.. ಈ ಹಾಡನ್ನ ಬೆರಳೆಣಿಕೆಷ್ಟು ಜನ ಹೊಗಳಿದ್ರೂ ,,, ಟ್ರೋಲ್ ಮಾಡುತ್ತಾ ಆಕ್ರೋಶ ಹೊರಹಾಕುತ್ತಿರೋರೇ ಹೆಚ್ಚು..
ತುಂಬಾ ಬೋಲ್ಡ್ ಆಗಿ ರೋಮ್ಯಾಂಟಿಕ್ ಆಗಿ ದೀಪಿಕಾ ಶಾರುಕ್ ಕಾಣಿಸಿಕೊಂಡಿದ್ದಾರೆ..
ಆದ್ರೆ ಹಿಂದೂ ಪರ ಹೋರಾಟಗಾರರ ಕೆಂಗಣ್ಣಿಗೆ ದೀಪಿಕಾ ಶಾರುಖ್ ಗುರಿಯಾಗಿದ್ದಾರೆ.. ದೀಪಿಕಾ ಧರಿಸಿರುವ ಬಿಕಿನಿ ಕೇಸರಿ ಬಣ್ಣದಾಗಿದೆ..
ಕೇಸರಿ ಬಣ್ಣದ ಬಿಕಿನಿ ತೊಟ್ಟು ತೀರ ಕಸಿಬಿಸಿ ಎನಿಸುವಂತಹ ಅವತಾರದಲ್ಲಿ ದೀಪಿಕಾ ಕಾಣಿಸಿರೋದು ಹಿಂದೂ ಪರ ಹೋರಾಟಗಾರರ ಕಣ್ ಕೆಂಪಾಗಿಸಿದೆ..
ಬಾಯ್ಕಾಟ್ ಗೆ ಸದ್ದು ಎದ್ದಿತ್ತು..
ಆದ್ರೆ ಇದೀಗ ಬಾಯ್ಕಾಟ್ ಸುಳಿಯಲ್ಲಿ ಸಿಕ್ಕರೆ ಸಿನಿಮಾದ ಭವಿಷ್ಯ ಮುಗಿದಂತೆಯೇ ಎಂಬ ಯೋಚನೆ ಬಂದಂತೆ ಕಾಣ್ತಿದೆ ಪಠಾಣ್ ಸಿನಿಮಾ ತಂಡ.
ವಿವಾದಕ್ಕೆ ಹೆದರಿ ‘ಬೇಷರಂ’ ಸಾಂಗ್ ಡಿಲೀಟ್ ಮಾಡುವ ಪ್ಲಾನ್ ಮಾಡಿದ್ದಾರೆ ಎನ್ನಲಾಗ್ತಿದೆ..
ಒಟ್ನಲ್ಲಿ ಅಮಿರ್ ಖಾನ್ , ಅಕ್ಷಯ್ ಕುಮಾರ್ ರನ್ನೂ ಬಿಡದ ಬಾಯ್ಕಾಟ್ ಬಲೆಯಲ್ಲಿ ಸಿಲುಕುವ ಭಯಕ್ಕೆ ಶಾರುಖ್ ಖಾನ್ ಟೆನ್ಷನ್ ಆಗಿರೋ ಹಾಗೆ ಕಾಣ್ತಿದೆ..
ಜ.25ಕ್ಕೆ ವಿಶ್ವದಾದ್ಯಂತ ‘ಪಠಾಣ್’ ರಿಲೀಸ್ ಆಗಲಿದೆ..