Lumpy Skin Disease: ಹಸುಗಳ ಚರ್ಮ ಗಂಟು ರೋಗಕ್ಕೆ ಔಷಧಿ ತಯಾರಿಕೆಗೆ ಪ್ರಯತ್ನಿಸುತ್ತಿದೆ ಪತಂಜಲಿ – ಬಾಬಾ ರಾಮ್ ದೇವ್
ಸುಮಾರು 1 ಲಕ್ಷ ಹಸುಗಳ ಸಾವಿಗೆ ಕಾರಣವಾದ ಲಂಪಿ ಸ್ಕಿನ್ ಡಿಸೀಸ್ (ಎಲ್ಎಸ್ಡ) ಕಾಯಿಲೆಗೆ ಔಷಧಿ ಅಭಿವೃದ್ಧಿಪಡಿಸಲು ಪತಂಜಲಿ ಗ್ರೂಪ್ ಪ್ರಯತ್ನಿಸುತ್ತಿದೆ ಎಂದು ಬಾಬಾ ರಾಮ್ದೇವ್ ಶುಕ್ರವಾರ ಹೇಳಿದ್ದಾರೆ.
“ಪಾಕಿಸ್ತಾನದಿಂದ ಬಂದಿರಬಹುದು” ಎನ್ನಲಾಗುವ ಈ ರೋಗದ ಬಗ್ಗೆ ರೈತರಿಗೆ ಜ್ಞಾನ ನಿಡುವಂತೆ ಸರ್ಕಾರಕ್ಕೆ ರಾಮ್ ದೇವ್ ಬಾಬಾ ಶಿಫಾರಸ್ಸು ಮಾಡಿದ್ದಾರೆ. ರೋಗ ರಾಷ್ಟ್ರವನ್ನ ಹೇಗೆ ಪ್ರವೇಶಿಸಿತು ಮತ್ತು ಅನೇಕ ಸ್ಥಳಗಳಿಗೆ ಹೇಗೆ ಹರಡಿತು ಎಂಬುದನ್ನು ಸರ್ಕಾರ ಪರಿಶೀಲಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಸುದ್ದಿಗಾರರಿರೊಂದಿಗೆ ಮಾತನಾಡಿದ ರಾಮ್ ದೇವ್ ಬಾಬಾ ನಾವು ಮುದ್ದೆ ಚರ್ಮ ಅಥವಾ ಚರ್ಮ ಗಂಟು ರೋಗಕ್ಕೆ ಕಾರಣವಾಗುವ ವೈರಸ್ ಮೇಲೇ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಕಾಯಿಲೆಯಿಂದ ಸುಮಾರು ಒಂದು ಲಕ್ಷ ಹಸುಗಳು ಸಾವನ್ನಪ್ಪಿವೆ ಎಂದು ಅವರು ಹೇಳಿದ್ದಾರೆ.
ತಮ್ಮ ಹರಿದ್ವಾರದ ಆಶ್ರಯ ಮನೆಯಲ್ಲಿದ್ದ ಹಲವಾರು ಹಸುಗಳಿಗೂ ಈ ರೋಗ ತಗುಲಿದೆ, ಆದರೆ ಒಂದು ಹಸುವೂ ಸತ್ತಿಲ್ಲ ಎಂದು ರಾಮದೇವ್ ಬಾಬಾ ತಿಳಿಸಿದ್ದಾರೆ.
“ನಾವು ಹಸುಗಳಿಗೆ ಗಿಲೋಯ್ನಂತಹ ಆಯುರ್ವೇದ ಔಷಧಿಗಳೊಂದಿಗೆ ಚಿಕಿತ್ಸೆ ನೀಡಿದ್ದೇವೆ. ಉತ್ತಮ ರೋಗನಿರೋಧಕ ಶಕ್ತಿ ಹೊಂದಿರುವ ಹಸುಗಳು ಈ ಕಾಯಿಲೆಯಿಂದ ಸೋಂಕಿಗೆ ಒಳಗಾಗುವುದಿಲ್ಲ” ಎಂದು ಅವರು ಹೇಳಿದರು.