ಪಠಾಣ್ ಚಿತ್ರದ ಮೋಷನ್ ಪೋಸ್ಟರ್, ಬಿಡುಗಡೆ ದಿನಾಂಕ ಪ್ರಕಟ….
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅಭಿನಯದ ಬಹು ನಿರೀಕ್ಷಿತ ‘ಪಠಾಣ್’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಬಾಲಿವುಡ್‌ನಲ್ಲಿ 30 ವರ್ಷಗಳನ್ನು ಪೂರೈಸಿರುವ ನಟ ಶಾರುಖ್ ಖಾನ್ ತಮ್ಮ ಬಹು ನಿರೀಕ್ಷಿತ ಚಿತ್ರ ‘ಪಠಾಣ್’ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.
ಪಠಾಣ್ ಚಿತ್ರದಲ್ಲಿ ತಮ್ಮ ಲುಕ್ ಅನ್ನು ರಿವೀಲ್ ಮಾಡಿರುವ ಶಾರುಖ್ ಖಾನ್ ಮೋಷನ್ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಗನ್ ಹಿಡಿದುಕೊಂಡು ಅಪಾಯಕಾರಿ ಕಾರ್ಯಾಚರಣೆಗೆ ಸಿದ್ಧವಾಗಿರುವಂತೆ ಪೋಸ್ಟರ್ ನಲ್ಲಿ ತೋರಿಸಲಾಗಿದೆ.
https://twitter.com/i/status/1540583404252569600
’30 ವರ್ಷಗಳು… ನಿಮ್ಮ ಪ್ರೀತಿ ಮತ್ತು ನಗು ಅಪರಿಮಿತವಾಗಿದೆ. ಈಗ ‘ಪಠಾಣ್’ ಬಗ್ಗೆ ಮಾತನಾಡೋಣ. ಚಿತ್ರವು ಜನವರಿ 25, 2023 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಶಾರುಖ್ ಖಾನ್ ಟ್ವೀಟ್ ಮಾಡಿದ್ದಾರೆ.
ಪಠಾಣ್ ಚಿತ್ರದಲ್ಲಿ ಶಾರುಖ್ ಖಾನ್ ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಜಾನ್ ಅಬ್ರಹಾಂ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. .








