Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!
ಜನವರಿ 25ಕ್ಕೆ ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ…
4 ವರ್ಷಗಳ ನಂತರ ಶಾರುಖ್ ಖಾನ್ ನಟನೆಯ ಸಿನಿಮಾವೊಂದು ತೆರೆಗಪ್ಪಳಿಸಿದೆ…
4 ವರ್ಷಗಳ ಹಿಂದೆ ಶಾರುಖ್ ಕೊನೆಯದಾಗಿ ಝೀರೋ ಸಿನಿಮಾದಲ್ಲಿ ನಟಿಸಿದ್ದರು.. ಆದ್ರೆ ಈ ಸಿನಿಮಾ ಝೀರೋದಂತೆಯೇ ಅಟ್ಟರ್ ಫ್ಲಾಪ್ ಆಗಿತ್ತು.. KGF ಸಿನಿಮಾದೆದುರು ಹೀನಾಯವಾಗಿ ಸೋತಿತ್ತು..
ಇದೀಗ ರಿಲೀಸ್ ಆಗಿರುವ ಪಠಾಣ್ ಹೊಸ ಭರವಸೆಯ ಬೆಳಕಂತೆ ಬಾಲಿವುಡ್ ಪಾಲಿಗೆ ಕಾಣುತ್ತಿದೆ.. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋತು ಸುಣ್ಣವಾಗಿದ್ದ ಬಾಲಿವುಡ್ ಪಾಲಿಗೆ ಈ ಪಠಾಣ್ ಆಶಾಕಿರಣದಂತೆ ಕಾಣುತ್ತಿದೆ..
ಅಂದ್ಹಾಗೆ ಪಠಾಣ್ ಸಿನಿಮಾ ರಿಲೀಸ್ ಮಾಡಲೇ ಬಾರದೆಂದು ಹಿಂದೂಪರ ಹೋರಾಟಗಾರರೂ ಸೇರಿದಂತೆ ಹಲವರು ವಿರೋಧಿಸಿದ್ದರಾದ್ರೂ ಸಿನಿಮಾ ಬಾಯ್ಕಾಟ್ ಬಿಸಿಯ ನಡುವೆಯೂ ರಿಲೀಸ್ ಆಗಿದೆ…
ಸಿನಿಮಾಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯ ರಿವ್ಯೂವ್ ಗಳನ್ನ ನೆಟ್ಟಿಗರು ಕೊಡುತ್ತಿದ್ದಾರೆ.. ಇದು ಸ್ಪೈ ವರ್ಸ್ ಸಿನಿಮಾವಾಗಿದೆ..
ಅಂದ್ಹಾಗೆ ಕೇವಲ ವಿವಾದಗಳಿಮದಲೇ ಸುದ್ದಿಯಾದ ಸಿನಿಮಾದ ಮೇಲೆ ಮುಖ್ಯವಾಗಿ ಹಿಂದೂ ಪರ ಹೋರಾಟಗಾರರು ಕೆಂಡ ಕಾರಲು ಕಾರಣ ಕೇಸರಿ ವಿವಾದ..
ಈ ಸಿನಿಮಾದಲ್ಲಿನ ಬೇಷರಂ ರಂಗ್ ಹಾಡು ಅಂದ್ರೆ ಈ ಹಾಡಿನ ಸಾಲಿನ ಅರ್ಥ ನಾಚಿಕೆಯಿಲ್ಲದ ಬಣ್ಣ ಅಂತ.. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.. ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ..
ಆದ್ರೆ ಅವರು ತೊಟ್ಟ ಕೇಸರಿ ಬಿಕಿನಿಯೇ ಈ ವಿವಾದಕ್ಕೆ ಕಾರಣವಾಯ್ತು.. ಅದು ಅಲ್ದೇ ಈ ಹಾಡಿನ ಕೆಲ ದೃಶ್ಯವಂತೂ ಬಹಳ ಅಶ್ಲೀಲವೆನಿಸುವಂತೆಯೂ ಇದೆ ಎಂಬುದು ಹಲವರ ವಾದ… ಹೀಗಾಗಿ ಈ ಸಿನಿಮಾ ರಿಲೀಸ್ ಆಗಬಾರದು.. ಈ ಹಾಡು ಕಟ್ ಮಾಡಬೇಕೆಂದೆಲ್ಲಾ ವಿರೋಧ ವ್ಯಕ್ತವಾಗಿತ್ತು.. ಅಷ್ಟೇ ಅಲ್ಲ ಇಂತಹ ಅದೆಷ್ಟೂ ಸೀನ್ ಗಳಿಗೆ ಸೆನ್ಸಾರ್ ಮಂಡಳಿ ಸೂಚನೆಯ ನಂತರ ಕತ್ತರಿ ಹಾಕಲಾಗಿದೆ..
ಇಷ್ಟೆಲ್ಲಾ ವಿವಾದದ ನಂತರವೂ ಸಿನಿಮಾ ರಿಲೀಸ್ ಆಗಿದೆ…
ಆದ್ರೆ ಹಲವೆಡೆ ಈ ಸಿನಿಮಾಗೆ ವಿಘ್ನ ಎದುರಾಗಿದೆ.. ಹಲವು ಥಿಯೇಟರ್ ಗಳ ಎದುರು ಹಿಂದೂ ಪರ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ..
ಅಂತೆಯೇ ಕರ್ನಾಟಕದ ಕಾರವಾರದಲ್ಲೂ ಪ್ರತಿಭಟನೆ ನಡೆದಿದೆ.. ಅರ್ಜುನ್ ಚಿತ್ರಮಂದಿರದಲ್ಲಿ ಪಠಾಣ್ ಚಿತ್ರ ಪ್ರದರ್ಶಿದಂತೆ ಆಗ್ರಹಿಸಿ ಗುರುವಾರ ಪ್ರತಿಭಟನೆಗೆ ಯತ್ನಿಸಿದ ಹಿಂದೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ದೇಶ ವಿರೋಧಿ ದೃಶ್ಯಗಳನ್ನು ತೋರಿಸಲಾಗಿದೆ ಎಂದು ಆರೋಪಿಸಿ ಪಠಾಣ್ ಚಿತ್ರ ಪ್ರದರ್ಶಿಸಲು ಅವಕಾಶ ನೀಡಬಾರದು ಎಂದು ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದರು.
ಅಲ್ಲದೇ ಪ್ರದರ್ಶನ ಮುಂದುವರೆದರೆ ಪ್ರತಿಭಟಿಸುವುದಾಗಿ ಬುಧವಾರ ಎಚ್ಚರಿಸಿದ್ದರು. ಆದರೆ ಚಿತ್ರಮಂದಿರದಲ್ಲಿ ಪಠಾಣ್ ಚಲನಚಿತ್ರ ಪ್ರದರ್ಶನ ನಡೆಯುತ್ತಿದ್ದ ಕಾರಣ ಚಿತ್ರಮಂದಿರದ ಗೇಟಿಗೆ ಬೀಗ ಹಾಕಲು ಕಾರ್ತಕರ್ತರು ಮುಂದಾದರು. ಈ ವೇಳೆ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದು ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದರು.
ಒಟ್ಟಾರೆ ಒಂದೆಡೆ ಪಠಾಣ್ ಅಬ್ಬರ ಥಿಯೇಟರ್ ನಲ್ಲಿ ಮುಂದುವರೆದರೆ , ಮತ್ತೊಂದೆಡೆ ಸಿನಿಮಾದ ಮೇಲೆ ವಿರೋಧದ ಕಾವು ಕೂಡ ಹೆಚ್ಚಾಗ್ತಿದೆ.. ಆದ್ರೆ ಅಸಲಿಗೆ ಸಿನಿಮಾ ಹೇಗಿದೆ.. ಜನ ಯಾವ ರೀತಿ ಸ್ಪಂದಿಸುತ್ತಿದ್ದಾರೆ ಅನ್ನೋದು ಫಸ್ಟ್ ಡೇ ಕಲೆಕ್ಷನ್ ನ ವರದಿ ಬಂದ ನಂತರವೇ ಗೊತ್ತಾಗಲಿದೆ..