ಅಂಕೋಲಾ ಶಾಸಕರೇ ಇದನ್ನೊಮ್ಮೆ ಗಮನಿಸಿ

1 min read
ankola

5 ಕಿ.ಮೀ ವೃದ್ಧನನ್ನು ಹೊತ್ತೊಯ್ದ ಕುಟುಂಬಸ್ಥರು

ಅಂಕೋಲಾ : ರಸ್ತೆ ವ್ಯವಸ್ಥೆ ಇಲ್ಲದ್ದರಿಂದ ರೋಗಿಯನ್ನ 5 ಕಿಲೋಮೀಟರ್ ದೂರ ಜೋಲಿಯಲ್ಲೇ ಆಸ್ಪತ್ರೆಗೆ ಹೊತ್ತೊಯ್ದ ಮನಕಲಕುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.

ತಾಲೂಕಿನ ವರೀಲಬೇಣಾ ಗ್ರಾಮದ 70 ವರ್ಷದ ನೂರಾ ಪೊಕ್ಕ ಗೌಡ ಎಂಬುವವರು ನಿನ್ನೆ ಪಾಶ್ರ್ವವಾಯುವಿಗೆ ತುತ್ತಾಗಿದ್ದರು.

ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಬೇಕಾಗಿದ್ದು ವರೀಲಬೇಣಾ ಕುಗ್ರಾಮವಾದ್ದರಿಂದ ರಸ್ತೆ ಸಮರ್ಪಕವಾಗಿ ಇಲ್ಲದ ಕಾರಣ ಐದು ಕಿಲೋಮೀಟರ್ ದೂರದ ಅಂಕೋಲಾ ಪಟ್ಟಣಕ್ಕೆ ಕುರ್ಚಿಯಲ್ಲಿ ಕೂರಿಸಿ ಕಾಡಿನ ದಟ್ಟ ಹಾದಿಯಲ್ಲಿ ಕುಟುಂಬದವರು ಜೋಲಿಮಾಡಿ ಕರೆತಂದಿದ್ದಾರೆ.

ankola

ಗುಡ್ಡಗಾಡು ಪ್ರದೇಶವಾದ್ದರಿಂದ ಅಂಬ್ಯುಲೆನ್ಸ್ ಬರುವುದು ಸಹ ಸಾಧ್ಯವಿಲ್ಲದ್ದರಿಂದ ಹೊತ್ತೊಯ್ಯಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಜಿಲ್ಲೆಯ ಹಲವು ಭಾಗದಲ್ಲಿ ನಗರ ಸಮೀಪವಿದ್ದರೂ ಸಹ ರಸ್ತೆಗಳು ಸಮರ್ಪಕವಾಗಿ ಇಲ್ಲದ ಕಾರಣ ಅಂಬ್ಯುಲೆನ್ಸ್ ಬರುವುದು ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಇದ್ದು ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಕುಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಿಕೊಡುವ ಕೆಲಸ ಮಾಡಬೇಕಾಗಿದೆ ಅಂತಾ ಗ್ರಾಮಸ್ಥರು ಮನವಿ ಮಾಡಿದ್ದಾರೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd