ಆಯುಷ್ ಸಾಂಪ್ರದಾಯಿಕ ಮತ್ತು ಪೌಷ್ಠಿಕಾಂಶಯುಕ್ತ ಆಹಾರ ಪಟ್ಟಿಯಲ್ಲಿ ಕರಾವಳಿಯ ಅಡುಗೆ ಪತ್ರೊಡೆ
ಕೇಂದ್ರದ ಆಯುಷ್ ಸಚಿವಾಲಯ ಪೌಷ್ಠಿಕಾಂಶಯುಕ್ತ ಆಹಾರ ಸೇವನೆಗೆ ಸಲಹೆ ನೀಡಿರುವ 26 ಬಗೆಯ ಸಾಂಪ್ರದಾಯಿಕ ಅಡುಗೆಗಳ ರೆಸಿಪಿಗಳನ್ನು ಪ್ರಕಟಿಸಿದೆ. ಈ ಅಡುಗೆಗಳ ಪಟ್ಟಿಯಲ್ಲಿ ಕರಾವಳಿಯ ಪತ್ರೊಡೆ ಸಹ ಸೇರಿದೆ.
ಕರ್ನಾಟಕದ ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವ ಪತ್ರೊಡೆಗೆ ಈ ಮುಖಾಂತರ ರಾಷ್ಟ್ರಮಟ್ಟದ ಮನ್ನಣೆ ಸಿಕ್ಕಂತಾಗಿದೆ. ಆಯುಷ್ ರೆಸಿಪಿಗಳ ಸಂಗ್ರಹದಲ್ಲಿ ಕೆಸುವಿನ ಎಲೆಯಲ್ಲಿ ಮಾಡುವ ಪತ್ರೊಡೆಯ ವಿಧಾನವನ್ನು ವಿವರಿಸಲಾಗಿದೆ.
ಆಯುಷ್ ವೆಬ್‌ಸೈಟ್‌ನಲ್ಲಿ 26 ಸಾಂಪ್ರದಾಯಿಕ ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಲಾಗಿರುವ ಬುಕ್‌ಲೆಟ್ ಲಭ್ಯವಿದೆ
ಬೇಕಾಗುವ ಸಾಮಗ್ರಿಗಳು, ತಯಾರಿಸುವ ವಿಧಾನ, ಆರೋಗ್ಯಕ್ಕೆ ಸಿಗುವ ಲಾಭ ಮತ್ತು ಯಾವುದನ್ನು ಅತಿಯಾಗಿ ಬಳಸಬಾರದು ಎಂಬ ಎಚ್ಚರಿಕೆಯೂ ಇದರಲ್ಲಿದೆ.
ಪತ್ರೊಡೆಯಲ್ಲಿ ಜೀರ್ಣ ಕ್ರಿಯೆಗೆ ಅಗತ್ಯವಿರುವ ನಾರಿನ ಅಂಶ ಅಧಿಕಮಟ್ಟದೆ. ಕೆಸುವಿನ ಎಲೆಗಳಲ್ಲಿ ಕಬ್ಬಿಣಾಂಶ, ವಿಟಮಿನ್ ಸಿ ಹಾಗೂ ಬೀಟಾ ಕರೊಟೀನ್ ಅಂಶಗಳು ಸಹ ಹೆಚ್ಚಿದೆ. ಇದರಿಂದಾಗಿ ರಕ್ತದಲ್ಲಿ ಹಿಮೊಗ್ಲೋಬಿನ್ ಮಟ್ಟ ಹೆಚ್ಚಾಗಲು ಕಾರಣವಾಗುತ್ತದೆ. ರುಮಟಾಯ್ಡ್ ಆರ್ಥ್ರೈಟಿಸ್ ರೋಗಿಗಳಲ್ಲಿ ಉರಿಯೂತ ಕಡಿಮೆ ಮಾಡಲು ಪತ್ರೊಡೆ ಸಹಕಾರಿ ಎಂದು ಕೂಡ ಆಯುಷ್ ಮಾಹಿತಿ ನೀಡಿದೆ.
ಕರ್ನಾಟಕ ಮಾತ್ರವಲ್ಲದೆ, ಕೇರಳ, ಮಹಾರಾಷ್ಟ್ರ, ಗೋವಾ, ಹಿಮಾಚಲ ಪ್ರದೇಶ, ಗುಜರಾತ್ ಹಾಗೂ ಈಶಾನ್ಯ ಪ್ರದೇಶದ ಕೆಲವು ಭಾಗಗಳಲ್ಲಿ ಸಹ ಬೇರೆ ಹೆಸರುಗಳಿಂದ ಪತ್ರೊಡೆ ತಯಾರಿಸುತ್ತಾರೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಪತ್ರೊಡೆಗೆ ಅಗತ್ಯವಿರುವ ಕೆಸುವಿನ ಎಲೆಗಳು ಹೇರಳವಾಗಿ ಬೆಳೆಯುವುದರಿಂದ ಆ ಸಮಯದಲ್ಲಿ ಪತ್ರೊಡೆ ತಯಾರಿಸಲಾಗುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಉತ್ತಮ ಆದಾಯ ನೀಡುವ ಅಂಚೆ ಕಚೇರಿಯ 7 ಯೋಜನೆಗಳು#postofficeschemes https://t.co/Wi9syUu1S5
— Saaksha TV (@SaakshaTv) June 27, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ಕಡ್ಲೆಬೇಳೆ ಮಸಾಲೆ ವಡೆ#Saakshatv #cookingrecipe #masalavade https://t.co/tzZADVNKSM
— Saaksha TV (@SaakshaTv) June 27, 2021
ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#mangopeel #healthbenefits https://t.co/6Gee3KyOpO
— Saaksha TV (@SaakshaTv) June 26, 2021
ಟೋಕಿಯೊದಲ್ಲಿ ಕೊರೋನಾ ಸೋಂಕು ಹೆಚ್ಚಳ – ಒಲಿಂಪಿಕ್ ಕ್ರೀಡಾಕೂಟ ರದ್ದುಗೊಳಿಸುವಂತೆ ಆಗ್ರಹ#OlympicGames https://t.co/97mIY48IEe
— Saaksha TV (@SaakshaTv) June 30, 2021
#Patrode #traditional #foodrecipe #AYUSH