pawan kalyan
2018ರ ನಂತರ ಟಾಲಿವುಡ್ ನ ಸ್ಟಾರ್ ನಟ ಪವನ್ ಕಲ್ಯಾಣ್ ಅವರು ನಟನೆಯಿಂದ ದೂರ ಉಳಿದುಬಿಟ್ಟಿದ್ದರು. “ಅಗ್ನಾತವಾಸಿ” ಚಿತ್ರದ ಬಳಿಕ ಪವನ್ ಕಲ್ಯಾಣ್ ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಕೊಂಡಿದ್ದು, ಸಕ್ರಿಯವಾಗಿದ್ದಾರೆ. ಆದರೆ ಇದೀಗ ಪವನ್ ಕಲ್ಯಾಣ್ ಅವರ ಅಭಿಮಾನಿಗಳಿಗೆ ಮತ್ತೊಮ್ಮೆ ಗುಡ್ ನ್ಯೂಸ್ ಸಿಕ್ಕಿದೆ. ಅದೇನೆಂದರೆ ಪವನ್ ಕಲ್ಯಾಣ್ ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.
ಹೌದು ಟಾಲಿವುಡ್ ನ ಸ್ಟಾರ್ ನಟ ಇದೀಗ “ವಕೀಲ ಸಾಬ್ ಚಿತ್ರದ” ಮೂಲಕ ಟಾಲಿವುಡ್ ಗೆ ಮತ್ತೆ ಎಂಟ್ರಿ ಆಗುತ್ತಿದ್ದಾರೆ. ಅಷ್ಟೇ ಅಲ್ಲ ಈಗಾಗಲೇ ಶೂಟಿಂಗ್ ಕೂಡ ಕಂಪ್ಲೀಟ್ ಆಗಿದ್ದು ಚಿತ್ರ ಬಿಡುಗಡೆಗೆ ಸಿನಿ ತಂಡ ತಯಾರಿ ನಡೆಸಿಕೊಂಡಿದೆ. ಅಕ್ಟೋಬರ್ 25 ದಸರಾ ಹಬ್ಬದ ಪ್ರಯುಕ್ತ ವಕೀಲ ಸಾಬ್ ಟೀಸರ್ ಬಿಡುಗಡೆಯಾಗಲಿದೆ. ಸಂಜೆ 5 ಗಂಟೆಗೆ ಟೀಸರ್ ಅಭಿಮಾನಿಗಳ ಮುಂದೆ ಬರಲಿದೆ.
ಹಿಂದಿಯ ಪಿಂಕ್ ಸಿನಿಮಾದ ರಿಮೇಕ್ ಆಗಿರುವ ಈ ಚಿತ್ರಕ್ಕೆ ಬೋನಿ ಕಪೂರ್ ಬಂಡವಾಳ ಹೂಡಿದ್ದಾರೆ. ಅಂದಹಾಗೆ ಹಿಂದಿಯಲ್ಲಿ ಬೋನಿಕಪೂರ್ ಅವರೇ ಪಿಂಕ್ ಸಿನಿಮಾ ನಿರ್ಮಾಣ ಮಾಡಿದರು. ಚಿತ್ರಕ್ಕೆ ಶ್ರೀರಾಮ್ ವೇಣು ಅವರು ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ಮಾಡಿದ ಪಾತ್ರವನ್ನು ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರು ನಿರ್ವಹಿಸಿದ್ದಾರೆ.
ಅಂದಹಾಗೆ ಚಿತ್ರದಲ್ಲಿ ನಿವೇತ ಥಾಮಸ್ ಅಂಜಲಿ ಅನನ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಎರಡು ವರ್ಷಗಳಿಂದ ಸಿನಿ ಜಗತ್ತಿನಿಂದ ದೂರಾಗಿ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಪವನ್ ಕಲ್ಯಾಣ್ ಅವರು ಇದೀಗ ಮತ್ತೆ ತೆರೆಮೇಲೆ ಬರಲಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
pawan kalyan
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel