ಆಂಧ್ರ ಸಿಎಂಗೆ ಕೊಲೆ ಬೆದರಿಕೆ ಹಾಕಿದ್ದ ಪವನ್ ಅಭಿಮಾನಿ ಅರೆಸ್ಟ್
ತೆಲಂಗಾಣದಲ್ಲಿ ಸಿನಿಮಾರಂಗ ಹಾಗೂ ಜಗನ್ ಸರ್ಕಾರದ ವಿರುದ್ಧದ ತಿಕ್ಕಾಟ ಹೆಚ್ಚಾಗ್ತಲೇ ಇದ್ದ ಬೆನ್ನಲ್ಲೇ ನಡುವೆ ಚಿರಂಜೀವಿ ಅವರು ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಜೊತೆಗೆ ಮಾತನಾಡಿದ ಮೇಲೆ ಈ ಬಗ್ಗೆ ಯೋಚಿಸಿ ಹೊಸ ಕರುಡು ತಯಾರಿದುವ ಭರವಸೆಯನ್ನ ಆಂಧ್ರ ಸಿಎಂ ನೀಡಿದ್ದರು.. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಮಾತ್ರ ಜಗನ್ ಮೋಹನ್ ರೆಡ್ಡಿ ಮೇಲೆ ಆಕ್ರೋಶ ಕಡಿಮೆಯಾಗಿಲ್ಲ.. ಇತ್ತೀಚೆಗೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ ಸಿಎಂ ಜಗನ್ ಮೋಹನ್ ಅನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಮಾನವ ಬಾಂಬ್ ಆಗಿ ಜಗನ್ ಅನ್ನು ಕೊಲ್ಲುತ್ತೇನೆ ಎಂದು ಟ್ವಿಟ್ಟರ್‌ನಲ್ಲಿ ಹೇಳಿದ್ದ. ಈ ಟ್ವೀಟ್ ಭಾರೀ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಈತನ ವಿರುದ್ಧ ತಿರುಪತಿ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.. ಇದೀಗ ಈ ರೀತಿ ಹೇಳಿಕೆ ನಿಡಿದ್ದ ಅಭಿಮಾನಿಯನ್ನ ಬಂಧಿಸಲಾಗಿದೆ.
ರಾಜಮಹೇಂದ್ರವರಂನ 27 ವರ್ಷದ ರಾಜಾಪಲೇಮ್ ಫಣಿ ಬಂಧಿತ ಆರೋಪಿಯಾಗಿದ್ದಾನೆ. ಈತ ಸೋಶಿಯಲ್ ಮೀಡಿಯಾ ಮೂಲಕವಾಗಿ ಕೊಲೆ ಬೆದರಿಕೆಯನ್ನು ಹಾಕಿದ್ದ. ಜನವರಿ 16 ರಂದು ಟ್ವಿಟರ್‌ನಲ್ಲಿ ಸರಣಿ ಟ್ವೀಟ್‍ಗಳನ್ನು ಮಾಡಿ ಜಗನ್ ಮೋಹನ್ ರೆಡ್ಡಿ ಅವರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಟ್ವೀಟ್‍ಗಳು ವೈರಲ್ ಆಗಿದ್ದನ್ನು ಗಮನಿಸಿ ಅವುಗಳನ್ನು ಅಳಿಸಿ ಹಾಕಿದ್ದ. ಈ ಕುರಿತು ಜಗನ್ ಸೇವಾದಳದ ಉಪಾಧ್ಯಕ್ಷ ಮಲ್ಯಂ ಶ್ರೀಕಾಂತ್ ಎನ್ನುವರು ತಿರುಪತಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸಿಐಡಿ ಸೈಬರ್ ಕ್ರೈಂ ವಿಭಾಗದ ಪೊಲೀಸರು ಐಪಿ ವಿಳಾಸ ಆಧರಿಸಿ ಬೆದರಿಕೆ ಹಾಕಿದ್ದವನನ್ನು ಬಂಧಿಸಿದ್ದಾರೆ. ಈತ ಪವನ್ ಕಲ್ಯಾಣ ಅವರ ಜನಸೇನಾ ಪಕ್ಷದ ಬೆಂಬಲಿಗನಾಗಿದ್ದ. ಈತನನ್ನ ಬಂಧಿಸಿರುವ ಪೊಲೀಸರು ನಾನಾ ಕಾಯ್ದೆಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.