Pay equity: ಮಹಿಳಾ ಕ್ರಿಕೆಟಿಗರಿಗೂ ಸಮಾನ ವೇತನ ಜಾರಿಗೊಳಿಸಿದ ಬಿಸಿಸಿಐ
ಬಿಸಿಸಿಐ ಲಿಂಗ ತಾರತಮ್ಯವನ್ನ ತೊಡೆದು ಹಾಕುವಲ್ಲಿ ಕ್ರಾಂತಿಕಾರಿ ನಿರ್ಧಾರ ತೆಗೆದುಕೊಂಡಿದ್ದು, ಗುತ್ತಿಗೆ ಪಡೆದ ಪುರುಷ ಆಟಗಾರರಿಗೆ ಸಮಾನವಾಗಿ ಮಹಿಳಾ ಆಟಗಾರರಿಗೆ ಪಂದ್ಯ ಶುಲ್ಕ ನೀಡುವುದಾಗಿ ಬಿಸಿಸಿಐ ಘೋಷಿಸಿದೆ.
ಈ ಬೆಳವಣಿಗೆಯ ಮಾಹಿತಿಗಳನ್ನ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವಿಟರ್ನಲ್ಲಿ ಪ್ರಕಟಿಸಿದ್ದಾರೆ.
“ಲಿಂಗ ತಾರತಮ್ಯವನ್ನು ಎದುರಿಸಲು BCCI ನ ಮೊದಲ ಹೆಜ್ಜೆಯನ್ನು ಘೋಷಿಸಲು ನನಗೆ ಸಂತೋಷವಾಗಿದೆ. ಒಪ್ಪಂದದಂತೆ ಮಹಿಳಾ ಕ್ರಿಕೆಟ್ ಆಟಗಾರರಿಗೆ ಸಮಾನ ವೇತನ ನೀತಿಯನ್ನ ಜಾರಿಗೊಳಿಸುತ್ತಿದ್ದೇವೆ.
ನಾವು ಲಿಂಗ ಸಮಾನತೆಯ ಹೊಸ ಯುಗಕ್ಕೆ ಹೋದಂತೆ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಪಂದ್ಯ ಶುಲ್ಕ ಒಂದೇ ಆಗಿರುತ್ತದೆ” ಎಂದು ಜಯ್ ಶಾ ಟ್ವೀಟ್ ಮಾಡಿದ್ದಾರೆ.
ಹೊಸದಾಗಿ ಪರಿಚಯಿಸಲಾದ ವ್ಯವಸ್ಥೆಯ ಪ್ರಕಾರ, ಭಾರತೀಯ ಮಹಿಳಾ ಕ್ರಿಕೆಟಿಗರು ಈಗ ಪ್ರತಿ ಟೆಸ್ಟ್ಗೆ 15 ಲಕ್ಷ, ODI ಗೆ 6 ಲಕ್ಷ ಮತ್ತು T20I ಗೆ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಪುರುಷರಿಗೆ ಸರಿಸಮಾನವಾಗಿದೆ.
ಈ ವರ್ಷದ ಆರಂಭದಲ್ಲಿ, ನ್ಯೂಜಿಲೆಂಡ್ ಕ್ರಿಕೆಟ್ ಸಹ ಮಹಿಳಾ ಕ್ರಿಕೆಟ್ ಆಟಗಾರರರು ಪುರುಷ ಆಟಗಾರರರಷ್ಟೆ ಗಳಿಸಲು ಅನುವು ಮಾಡಿಕೊಟ್ಟಿತ್ತು. ಇದರ ಜೊತೆಗೆ ಕ್ರಿಕೆಟ್ ಆಸ್ಟ್ರೇಲಿಯಾ (CA) ಸಹ ಲಿಂಗ ಅಸಮಾನತೆಯನ್ನು ತೊಡೆದುಹಾಕಲು ಕೆಲಸ ಮಾಡುತ್ತಿದೆ.
Pay equity: BCCI announces equal match fee for its men and women cricketer