ಆಗಸ್ಟ್ 5ರಂದು ಐತಿಹಾಸಿಕ ಭೂಮಿ ಪೂಜೆ ನೆರವೇರಲಿದೆ: ಪೇಜಾವರ ಶ್ರೀಗಳು..!

ಆಗಸ್ಟ್ 5ರಂದು ಹಿಂದೂಗಳ ಕನಸಾದ ರಾಮಮಂದಿರ ನಿಮಾರ್ಣದ ಶಿಲಾನ್ಯಾಸ ಸಮಾರಂಭ ನಡೆಯಲಿದೆ. ಪ್ರಧಾನ ಮಂತ್ರಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲಿದ್ದು, ವಿವಿಧ ಧಾರ್ಮಿಕ ಮುಖಂಡರು ಹಾಗೂ ಗಣ್ಯರನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಈಗಾಗಲೇ ಶಿಲಾನ್ಯಾಸ ಸಮಾರಂಭಕ್ಕೆ ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಈ ನಡುವೆ ಈ ವಿಚಾರವಾಗಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಪ್ರತಿಕ್ರಿಯೆ ನೀಡಿದ್ದು, ಇದೇ ತಿಂಗಳ 5ನೇ ತಾರೀಕಿನಂದು ಐತಿಹಾಸಿಕ ಭೂಮಿಪೂಜೆ ನಡೆಯಲಿದೆ. ಅಂದು ಕೋಟ್ಯಂತರ ಆಸ್ತಿಕರ ಬಹುಕಾಲದ ಕನಸು ನನಸಾಗಲಿದೆ ಎಂದು ತಿಳಿಸಿದ್ದಾರೆ. ರಾಮಜನ್ಮ ಭೂಮಿ ಟ್ರಸ್ಟ್ ನ ಟ್ರಸ್ಟಿಯಾಗಿರುವ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೊರೊನಾದಿಂದಾಗಿ ನಮಗೆಲ್ಲ ದೈಹಿಕವಾಗಿ ಭಾಗವಹಿಸಲು ಸಾಧ್ಯ ಆಗದು. ಆದರೆ, ಈ ಕಾರ್ಯಕ್ರಮದ ನೇರಪ್ರಸಾರವನ್ನು ನಾವು ಇದ್ದ ಸ್ಥಳದಿಂದಲೇ ವಿಕ್ಷಣೆ ಮಾಡಿ ಭಾಗವಹಿಸೋಣ ಎಂದರು. ಇದೇ ವೇಳೆ ಕೊರೊನಾದಿಂದಾಗಿ ನಮಗೆಲ್ಲ ದೈಹಿಕವಾಗಿ ಭಾಗವಹಿಸಲು ಸಾಧ್ಯ ಆಗದು. ಆದರೆ, ಈ ಕಾರ್ಯಕ್ರಮದ ನೇರಪ್ರಸಾರವನ್ನು ನಾವು ಇದ್ದ ಸ್ಥಳದಿಂದಲೇ ವಿಕ್ಷಣೆ ಮಾಡಿ ಭಾಗವಹಿಸೋಣ ಎಂದಿರುವ ಶ್ರೀಗಳು ಶಿಲಾನ್ಯಾಸ ಸಮಾರಂಭದ ದಿನ ಮನೆಯ ಮೇಲೆ ಭಗವಾಧ್ವಜವನ್ನು ಹಾರಿಸುವ ಮೂಲಕ ಈ ಕಾರ್ಯಕ್ರಮದಲ್ಲಿ ಭಾಗವಹಿಸೋಣ ಎಂದು ಕರೆ ನೀಡಿದರು.

Leave a Reply

Your email address will not be published. Required fields are marked *

Recent Posts

YOU MUST READ

Pin It on Pinterest

Share This