ದೆಹಲಿಯಲ್ಲಿ ರೈತರ ಹೋರಾಟ : ಪ್ರತಿಭಟನೆಯ ದಿಕ್ಕು ತಪ್ಪಿದೆ ಅನಿಸುತ್ತಿದೆ : ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿಗಳು
ವಿಜಯಪುರ : ದೆಹಲಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರು ಹೌದಾ? ಅಲ್ಲವಾ ಎಂಬುದು ಸ್ಪಷ್ಟವಿಲ್ಲ ಎಂದು ವಿಜಯಪುರದಲ್ಲಿ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಮಹಾಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಭಾರತದ ಧ್ವಜವನ್ನು ಕೆಳಗಿಳಿಸುವುದು, ಕಾಲಿನಿಂದ ತುಳಿಯುವುದು. ಸಂವಿಧಾನದ ಪ್ರತಿಯನ್ನು ಸುಡುವುದು. ಖಲಿಸ್ತಾನ ಪರ ಘೋಷಣೆ ಹಾಕಲಾಗಿದೆ. ಇದನ್ನು ಗಮನಿಸಿದರೆ ಹೋರಾಟ ದಿಕ್ಕು ತಪ್ಪಿದೆ ಅನಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ. ಅವರು ರೈಲರಲ್ಲ ಎಂಬ ಸಂಶಯ ಮೂಡಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಧ್ಯಕ್ಕೆ ತೆಗೆದುಕೊಂಡಿರುವ ನಿಲುವು ಸರಿಯಾದ ದಿಕ್ಕಿನಲ್ಲಿವೆ. ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧವಿದ್ದು ಆಹ್ವಾನ ನೀಡುತ್ತಿದೆ. ಅದರ ಬಗ್ಗೆ ಸ್ಪಷ್ಟ ತಿಳುವಳಿಕೆ ಇಲ್ಲದ ರೀತಿಯಲ್ಲಿ ಹೋರಾಟ ಮುಂದುವರೆಸಿರುವುದು ಸರಿಯಲ್ಲ ಎಂದಿದ್ದಾರೆ.
ಇದೇ ವೇಳೆ ರಾಮ ಮಂದಿರ ನರ‍್ಮಾಣ ವಿಚಾರ, ದೇಶದ ಎಲ್ಲರ ಶ್ರದ್ಧೆ, ಭಕ್ತೀಯ ಪ್ರತಿಕವಾಗಿ ರಾಮ ಮಂದಿರ ನರ‍್ಮಾಣವಾಗಲಿದೆ, ರಾಮ ಮಂದಿರ ಹಿಂದೂ ಸಂಸ್ಕೃತಿಯ ಪ್ರತೀಕ, ಈ ನಿಟ್ಟಿನಲ್ಲಿ ಎಲ್ಲ ಕರ‍್ಯರ‍್ತರು ಶ್ರಮಿಸುತ್ತಿದ್ದಾರೆ, ಶ್ರೀರಾಮನನ್ನು ಪೂಜಿಸುವವರು ಉದಾರವಾಗಿ ದಾನ ನೀಡುತ್ತಿದ್ದಾರೆ, ಇದು ಅಭಿಮಾನ, ಶ್ರದ್ಧೆಯ ಪ್ರತೀಕವಾಗಿದೆ, ಎಲ್ಲೆಲ್ಲಿ ಸಾಧ್ಯವೂ ಅಲ್ಲಿಗೆ ತೆರಳಿ ನಿಧಿ ಸಂಗ್ರಹಿಸುತ್ತೇವೆ ಎಮದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








