ದಾವಣಗೆರೆ | ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಚಾಲಕನ ರಕ್ಷಣೆ
1 min read
ದಾವಣಗೆರೆ | ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಚಾಲಕನ ರಕ್ಷಣೆ
ದಾವಣಗೆರೆ : ಟ್ರ್ಯಾಕ್ಟರ್ ಅಡಿ ಸಿಲುಕಿದ್ದ ಚಾಲಕನನ್ನ ಜನರು ಪವಾಡ ರೀತಿಯಲ್ಲಿ ರಕ್ಷಿಸಿರುವ ಘಟನೆ ಹರಿಹರ ತಾಲೂಕಿನ ಇಂಗಳಗುಂದಿ ಬಳಿ ನಡೆದಿದೆ.
ಟ್ರ್ಯಾಕ್ಟರ್ ಪಲ್ಟಿಯಾಗಿ ಇಂಜಿನ್ ಅಡಿ ಸಿಲುಕಿದ್ದ ಯುವಕ ಸದ್ಯ ಸಾವಿನಿಂದ ಪಾರಾಗಿದ್ದಾನೆ.
ಇಂಗಳಗುಂದಿಯಿಂದ ಹುಲಿಗಿನಹೊಳೆಯ ಬಸವೇಶ್ವರ ಜಾತ್ರೆಗೆ ಟ್ರಾಕ್ಟರ್ ವೇಗವಾಗಿ ಹೋಗುತ್ತಿರುವಾಗ ನಿಯಂತ್ರಣ ತಪ್ಪಿ ಭತ್ತದ ಗದ್ದೆಗೆ ಉರುಳಿದೆ.
ಈ ವೇಳೆ ಯುವಕ ಟ್ರಾಕ್ಟರ್ ಇಂಜಿನ್ ಅಡಿ ಸಿಲುಕಿ ಅರ್ಧಗಂಟೆಗೂ ಅಧಿಕ ಕಾಲ ಸಾವು ಬದುಕಿನ ಮಧ್ಯ ಹೋರಾಡಿದ್ದ.
ಯುವಕ ಬದುಕಿರೋದನ್ನ ಗಮನಿಸಿ ಜೆಸಿಬಿಯಿಂದ ಟ್ರಾಕ್ಟರ್ ಮೇಲೆತ್ತಿ ಯುವಕನ್ನ ರಕ್ಷಣೆ ಮಾಡಿದ್ದಾರೆ.
ಬದುಕಿರೋ ಯುವಕನನ್ನ ಇಂಗಳಗುಂದಿ ಗ್ರಾಮದ ರವಿ ಎಂದು ಹೇಳಲಾಗಿದೆ.
