ದಲಿತರ ಬೀದಿಗೆ ದೇವರ ಮರೆವಣಿಗೆ ಕಳುಹಿಸಲು ಹಿಂದೇಟು
ತುಮಕೂರು: ತಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹಣಸೇಘಟ್ಟ ಗ್ರಾಮದಲ್ಲಿ ಇನ್ನೂ ಜಾತಿ ವ್ಯವಸ್ಥೆ ತಾಂಡವಾತ್ತಿದೆ.
ಈ ಗ್ರಾಮದಲ್ಲಿ ದಲಿತರ ಬೀದಿಗೆ ದೇವರನ್ನು ಕಳುಹಿಸಲು ಹಿಂದೇಟು ಹಾಕಿದ್ದಾರೆ. ಹಣಸೇಘಟ್ಟ ಗ್ರಾಮದಲ್ಲಿ ಮುಜರಾಯಿ ಇಲಾಖೆಗೆ ಸೇರಿರುವ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು, ಪ್ರತಿವರ್ಷ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವರ ಜಾತ್ರೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷ ಏಪ್ರಿಲ್ 23, 24 ರಂದು ಆಂಜನೇಯ ಸ್ವಾಮಿ ಜಾತ್ರೆ ನಡೆದಿದೆ.
ಜಾತ್ರೆಯಲ್ಲಿ ಆಂಜನೇಯ ಸ್ವಾಮಿ, ದೊಡ್ಡಮ್ಮ, ಚಿಕ್ಕಮ್ಮ ದೇವರುಗಳನ್ನ ಮೆರವಣಿಗೆ ಮಾಡಿದ್ದರು. ಆದರೆ ದಲಿತರ ಬೀದಿ ಬರುತ್ತಿದ್ದಂತೆ ಮೆರವಣಿಗೆ ಮಾಡದೇ ವಾಪಸ್ ತೆಗೆದುಕೊಂಡು ಹೋಗಿದ್ದಾರೆ. ಈ ಸಂಬಂಧ ಪ್ರಶನ್ನಿಸಿದಕ್ಕೆ ನಾವು ದಲಿತರ ಬೀದಿಗೆ ದೇವರನ್ನು ಕಳುಹಿಸಲ್ಲ. ದಲಿತರ ಬೀದಿಗೆ ಮೆರವಣಿಗೆ ತಂದರೆ ದೇವರಿಗೆ ಮೈಲಿಗೆ ಆಗುತ್ತೆ ಅಂತ ದಲಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ದಲಿತ ಬೀದಿಯಲ್ಲಿರುವ ಲಕ್ಷ್ಮೀದೇವಿ ದೇವಸ್ಥಾನಕ್ಕೆ ಬಂದು, ಮಂಗಳಾರತಿ ಮಾಡಿಸಿಕೊಂಡು ಹೋಗಿ ಅಂತ ದಲಿತರು ಪಟ್ಟು ಹಿಡಿದಿದ್ದರು. ಆದರೆ ಕೊನೆಗೂ ದೇವರ ಮೆರವಣಿಗೆಯನ್ನು ದಲಿತರ ಬೀದಿಗೆ ಕಳುಹಿಸದೆ ವಾಪಸ್ ಹೋಗಿದ್ದಾರೆ.








