ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿನ ನಾಗರಿಕರು ತಮ್ಮನ್ನು ಭಾರತದ ಜೊತೆಗೆ ಸೇರಿಸಬೇಕೆಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಪಾಕ್ ಆಡಳಿತದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಚಲೋ ಚಲೋ ಕಾರ್ಗಿಲ್ ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದು, ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ಈ ವರೆಗೆ ನಡೆದ ಅತಿದೊಡ್ಡ ಪ್ರತಿಭಟನೆ ಕೂಡ ಇದೇ ಎನ್ನಲಾಗಿದೆ. ಶಿಯಾ ಮುಸ್ಲಿಂರ ಧರ್ಮಗುರು ಅಘಾ ಬಕೀರ್ ಅಲ್ ಹುಸೇನಿ ಅವರು ಧಾರ್ಮಿಕ ಸಭೆಯಲ್ಲಿ ನೀಡಿದ ಪ್ರವಚನಗಳಲ್ಲಿ ಧರ್ಮ ನಿಂದನೆಯಾಗಿದೆ ಎಂದು ಆರೋಪಿಸಿ, ಅವರನ್ನು ಧರ್ಮ ನಿಂದನೆ ಕಾನೂನು ಅನ್ವಯ ಪಾಕ್ ಬಂಧಿಸಿದೆ.
ಇದನ್ನು ಖಂಡಿಸಿ, ಸ್ಕದೂ ಪ್ರದೇಶದ ನಿವಾಸಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಕರಣದಲ್ಲಿ ಧರ್ಮನಿಂದನೆಯಾಗಿದೆ ಎಂಬುವುದಕ್ಕಿಂತಲೂ ಬಕೀರ್ ಓರ್ವ ಶಿಯಾ ಸಮುದಾಯದ ಧರ್ಮ ಗುರು ಎಂದು ಅವರನ್ನು ಗುರಿಯಾಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಹೀಗಾಗಿ ಸ್ಥಳೀಯರು ಪಾಕ್ ಗೆ ಎಚ್ಚರಿಕೆ ನೀಡಿ, ಭಾರತದೊಂದಿಗೆ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಭಾರತದೊಂದಿಗೆ ವಿಲೀನಗೊಳಿಸಿಕೊಳ್ಳುತ್ತೇವೆಂದು ಪಟ್ಟು ಹಿಡಿದಿದ್ದಾರೆ.