Mandya | ರಸ್ತೆಯಲ್ಲಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ!

1 min read
people rushed to taking the grapes in road mandya saaksha tv

people rushed to taking the grapes in road mandya saaksha tv

Mandya | ರಸ್ತೆಯಲ್ಲಿ ಬಿದ್ದಿದ್ದ ದ್ರಾಕ್ಷಿಗಾಗಿ ಮುಗಿಬಿದ್ದ ಜನ!

ಮಂಡ್ಯದ ವಿಸಿ ಫಾರ್ಮ್ ಗೇಟ್ ಬಳಿ ಘಟನೆ

ತಾ ಮುಂದು ನಾ ಮುಂದು ಎಂದ ಜನರು

100 ಕ್ಕೂ ಹೆಚ್ಚು ಕೆ ಜಿ ದ್ರಾಕ್ಷಿ ರಸ್ತೆಗೆ

ಸದ್ಯ ದ್ರಾಕ್ಷಿ ಬೆಲೆ ಸದ್ಯಕ್ಕೆ 70 – 80 ರೂ  

ಮಾರ್ಕೆಟ್ ನಲ್ಲಿ ತರಕಾರಿಯ ಜೊತೆ ಜೊತೆಗೆ ಹಣ್ಣು ಹಂಪಲುಗಳ ಬೆಲೆಯೂ ಹೆಚ್ಚಾಗಿದೆ.

ಅದರಲ್ಲೂ ದ್ರಾಕ್ಷಿಯ ಬೆಲೆ 70 ರಿಂದ 80 ರೂಪಾಯಿವರೆಗೆ ಇದೆ.

ಇಂತಹ ಪರಿಸ್ಥಿತಿಯಲ್ಲಿ ಪುಕ್ಕಸಟ್ಟೆ ದ್ರಾಕ್ಷಿ ಸಿಕ್ಕರೇ ನಮ್ಮ ಜನ ಬಿಡ್ತಾರಾ..? ನೋ ವೇ ಚಾನ್ಸೇ ಇಲ್ಲ..

ಸಿಕ್ಕಿದವನಿಗೆ ಸೀರುಂಡೆ ಎಂಬಂತೆ ತಾ ಮುಂದು ನಾ ಮುಂದು ಅಂತಾ ಬಾಚಿಕೊಂಡು ಹೋಗುತ್ತಾರೆ.

people rushed to taking the grapes in road mandya saaksha tv
people rushed to taking the grapes in road mandya saaksha tv

ಅದರಂತೆ ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ದ್ರಾಕ್ಷಿಗಾಗಿ ಜನರು ಮುಗಿ ಬಿದ್ದಿದ್ದಾರೆ. 

ರಸ್ತೆಯಲ್ಲಿ ಅನುಮಾನಸ್ಪದವಾಗಿ ಬಿದ್ದಿದ್ದ ದ್ರಾಕ್ಷಿ ಗೊಂಚಲನ್ನು ಬಾಚಿಕೊಳ್ಳಲು ನಾ ಮುಂದು ತಾ ಮುಂದು ಎಂದು ಜನ ಮುಗಿ ಬಿದ್ದಿದ್ದಾರೆ.

ಈ ಘಟನೆ ಮಂಡ್ಯ ಜಿಲ್ಲೆಯ ವಿಸಿ ಫಾರ್ಮ್ ಗೇಟ್ ಬಳಿ ನಡೆದಿದೆ.

ರಸ್ತೆ ಬದಿ ಸುರಿಯಲಾಗಿರುವ ದ್ರಾಕ್ಷಿ ಗೊಂಚಲನ್ನು ಹ್ಯಾಂಡ್ ಕವರ್ ಹಾಗೂ ಚೀಲದಲ್ಲಿ ಜನರು ತಾ ಮುಂದು ನಾ ಮುಂದು ಎಂದು ಬಾಚಿಕೊಂಡಿದ್ದಾರೆ.

ವಿಸಿ ಫಾರ್ಮ್ ಗೇಟ್ ಬಳಿ ಯಾರೋ ಇದಕ್ಕಿದ್ದ ಹಾಗೆ ಕ್ಯಾಂಟರ್‌ ವಾಹನದಲ್ಲಿ ಬಂದು ಸುಮಾರು 100ಕ್ಕೂ ಹೆಚ್ಚು ಕೆಜಿ ದ್ರಾಕ್ಷಿಯನ್ನು ಸುರಿದು ಹೋಗಿದ್ದಾರೆ.

ದ್ರಾಕ್ಷಿ ಸುರಿಯುತ್ತಿದ್ದಂತೆ ಜನರು, ಆತ ಯಾಕೆ ಸುರಿಯುತ್ತಿದ್ದಾನೆ ಎಂದು ಕೇಳದೇ  ನಾ ಮುಂದು ತಾ ಮುಂದು ಎಂದು ದ್ರಾಕ್ಷಿಯನ್ನು ಬಾಚಿಕೊಂಡಿದ್ದಾರೆ. people rushed to taking the grapes in road mandya

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd