ಅಗತ್ಯ ವಸ್ತುಗಳ ಬೆಲೆ ಹೆಚ್ಚಳ : ದೇಶವಾಸಿಗಳು ವಿಲವಿಲ
ಹೆಮ್ಮಾರಿ ಕೊರೊನಾ ಕಾಟ.. ಲಾಕ್ ಡೌನ್ ಸಂಕಷ್ಟ.. ಇದರ ನಡುವೆ ಗಾಯದ ಮೇಲೆ ಬರೆ ಎಳೆದಂತೆ ದೇಶದಲ್ಲಿ ರಾಕೇಟ್ ವೇಗದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಆಗುತ್ತಿದೆ. ಬಡವನ ಬದುಕು ಸದ್ಯ ಬರ್ಬಾದ್ ಆಗಿದ್ದು, ಅಸಹಾಯಕನಾಗಿ ಬೀದಿಯಲ್ಲಿ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಕಳೆದೊಂದು ವಾರದಲ್ಲಿ ಅಡುಗೆ ಅನಿಲ ಬೆಲೆ 50 ರೂಪಾಯಿ ಹೆಚ್ಚಾಗಿರುವುದು ಸೇರಿದಂತೆ ಜನರು ನಿತ್ಯ ಬಳಕೆ ವಸ್ತುಗಳ ಬೆಲೆ ಆಕಾಶ ಮುಟ್ಟುತ್ತಿವೆ.
ಕಳೆದ ಒಂದು ವರ್ಷದಿಂದ ದೇಶದಲ್ಲಿ ತೈಲ ಬೆಲೆ ಯಾರೂ ಊಹಿಸದ ರೀತಿಯಲ್ಲಿ ಏರಿಕೆಯಾಗಿದೆ. ಇದರ ನೇರ ಪರಿಣಾಮ ಜನರ ಮೇಲೆ ಬೀರಿದೆ. ಜನರ ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಸೇರಿದಂತೆ ಎಲ್ಲವೂ ದುಬಾರಿ ಆಗಿದೆ. ಇದರಿಂದ ಜನರು ಕಂಗಾಲಾಗಿದ್ದು, ಸರ್ಕಾರಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.
ಕೆಲವೇ ಕೆಲವು ತಿಂಗಳುಗಳ ಹಿಂದೆ 80ರೂ ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ, 70ರೂ ಆಸುಪಾಸಿನಲ್ಲಿದ್ದ ಡೀಸೆಲ್ ಬೆಲೆ ಇದೀಗ ನೂರ ಗಡಿ ದಾಟಿದೆ.
ತೊಗರಿ ಬೇಳೆ- ಪ್ರತಿ ಕೆಜಿ ದರ 102ರೂ ಇದ್ದದ್ದು 110ರೂ
ಕಡಲೆಬೇಳೆ- ಬೆಲೆ 62 ರಿಂದ 70ಕ್ಕೆ ಏರಿಕೆ
ಕಡಲೇಕಾಳು- 56 ರೂ ಇದ್ದದ್ದು 65 ರೂ ಏರಿಕೆ
ಹೆಸರುಕಾಳು- 80ರೂ ಇದ್ದದ್ದು 85ಕ್ಕೆ ಏರಿಕೆ
ಹೆಸರು ಬೇಳೆ- 85ರೂ ಇದ್ದದ್ದು 95ರೂ ಗೆ ಏರಿಕೆ
ಅಲಸಂದಿ ಕಾಳು 70ರೂನಿಂದ 75ಕ್ಕೆ ಏರಿಕೆ
ಅವರೆಕಾಳು ಪ್ರತಿ ಕೆಜಿ 60ರೂ ನಿಂದ 70ರೂ
ಕಾಬೂಲ್ ಕಾಳು 90-110ರೂ
ಸನ್ ಫ್ಯೂರ್ ಎಣ್ಣೆ ಪ್ರತಿ ಲೀಟರ್ ಬೆಲೆ 140-150
ಗೋಲ್ಡ್ ವಿನ್ನರ್- 140 – 150
ಕಡಲೆಕಾಯಿ ಎಣ್ಣೆ 180 -198
ಸಕ್ಕರೆ ಪ್ರತಿ ಕೆಜಿ ಬೆಲೆ 35 ರೂ ಇದ್ದದ್ದು ಇಂದು 40 ರೂಗೆ ಏರಿಕೆ
ಮೊದಲೇ ಕೊರೊನಾದಿಂದಾಗಿ ಸರಿಯಾದ ಕೆಲಸ ಇಲ್ಲ ಕೈಲಿ ಬಿಡಿಗಾಸು ನಿಲ್ತಾಯಿಲ್ಲ. ಇದ್ರಿಂದ ಜೀವನ ನಡೆಸೋದೆ ಕಷ್ಟ ಅಂತೀರೋ ಜನತೆಗೆ, ಬೆಲೆ ಏರಿಕೆಯ ಬಿಸಿ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ. ಪೆಟ್ರೋಲ್ ಡೀಸೆಲ್ ದರ ಹೆಚ್ಚಳವಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗಿರೋದು ಒಂದು ಕಡೆಯಾದ್ರೆ ಮತ್ತೊಂದು ಕಡೆ ನಿತ್ಯ ಬಳಕೆಯ ಗ್ಯಾಸ್ ಸಿಲಿಂಡರ್ ದರ ಊಹೆಗೂ ಮೀರಿ ಹೆಚ್ಚಳವಾಗಿದೆ.