ಇಂಧನ ಬೆಲೆ ಮತ್ತೆ ಏರಿಕೆ | ಆಯುಧ ಪೂಜೆ ದಿನವೂ ಜೇಬಿಗೆ ಕತ್ತರಿ petrol saaksha tv
ನವದೆಹಲಿ : ನಾಡಿನೆಲ್ಲೆಡೆ ಇಂದು ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ.
ಆದ್ರೆ ಹಬ್ಬದ ಸಂಭ್ರಮದಲ್ಲಿರುವ ಜನರಿಗೆ ತೈಲ ಕಂಪನಿಗಳು ಶಾಕ್ ನೀಡಿದ್ದು, ಇವತ್ತು ಮತ್ತೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ.
ತೈಲ ಕಂಪನಿಗಳು ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ 35 ಪೈಸೆಯಷ್ಟು ಹೆಚ್ಚಿಸಿವೆ.
ಇದರೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 104.79 ರೂಪಾಯಿ ಹಾಗೂ ಡೀಸೆಲ್ ದರ 93.54 ರೂಪಾಯಿ ಆಗಿದೆ.
ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.44 ರೂಪಾಯಿ ಇದ್ದು ಡೀಸೆಲ್ 99.26 ರೂಪಾಯಿ ನಿಗದಿಯಾಗಿದೆ.
ಇನ್ನುಳಿದಂತೆ ಮುಂಬೈನಲ್ಲಿ ಪೆಟ್ರೋಲ್ 110.75 ರೂಪಾಯಿ ಹಾಗೂ ಡೀಸೆಲ್ ದರ 101.40 ರೂಪಾಯಿಯಾಗಿದೆ.
ಪಾಟ್ನಾದಲ್ಲಿ ಪೆಟ್ರೋಲ್ ಪ್ರತಿ ಲೀಟರ್ಗೆ 108.04 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ಗೆ 100.07 ಇದೆ. ಡೀಸೆಲ್ ಬೆಲೆ ಸಹ ನೂರರ ಗಡಿ ದಾಟಿದೆ.