ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ Petrol
ನವದೆಹಲಿ : ದೇಶದಲ್ಲಿ ಒಂದು ದಿನದ ವಿರಾಮದ ಬಳಿಕ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ.
ರವಿವಾರ ಮೆಟ್ರೋ ನಗರದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಮತ್ತೆ ಏರಿಕೆಯಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‍ಗೆ 24 ಪೈಸೆ ಹೆಚ್ಚಳವಾಗಿದ್ದು, 92.34 ರಿಂದ. 92.58 ಕ್ಕೆ ಏರಿಕೆಯಾಗಿದೆ.
ಡೀಸೆಲ್ ಬೆಲೆ 27 ಪೈಸೆ ಏರಿಕೆಯಾಗಿದ್ದು, ಲೀಟರ್‍ಗೆ 82.95 ರೂ.ನಿಂದ 83.22 ಕ್ಕೆ ಏರಿಸಲಾಗಿದೆ.
ಪ್ರಸ್ತುತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮುಂಬೈಯಲ್ಲಿ ಗರಿಷ್ಠವಾಗಿದೆ.
ಮುಂಬೈಯಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 98.88 ರೂ.ಗೆ ಮಾರಾಟವಾಗುತ್ತಿದೆ ಹಾಗೂ ಡೀಸೆಲ್ ಅನ್ನು ಪ್ರತಿ ಲೀಟರ್‍ಗೆ 90.40 ಕ್ಕೆ ಮಾರಾಟ ಮಾಡಲಾಗುತ್ತಿದೆ.










