ನವದೆಹಲಿ : ದೇಶದಲ್ಲಿ ಇಂದೂ ಕೂಡ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗಿದೆ. ಇಂದಿನ ಬೆಲೆ ಪರಿಷ್ಕರಣೆಯ ನಂತರ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 25 ಪೈಸೆ ಹೆಚ್ಚಾದರೆ, ಡೀಸೆಲ್ ಗೆ 21 ಪೈಸೆ ಏರಿಕೆಯಾಗಿದೆ. ಪರಿಣಾಮ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 80.38 ರೂ. ಹಾಗೂ ಡೀಸೆಲ್ ಬೆಲೆ ಕೂಡ ದಾಖಲೆಯ ಗರಿಷ್ಠ 80.40 ರೂ. ಇದೆ.
ಇನ್ನು ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 82.99 ರೂ. ಇದ್ದರೆ, ಡೀಸೆಲ್ ಬೆಲೆ 76.45 ರೂ. ಆಗಿದೆ. ಮುಂಬೈನಲ್ಲೂ ಪೆಟ್ರೋಲ್ ಬೆಲೆ 87 ರೂ. ಗಡಿ ದಾಟಿದೆ. ಇಂದು ಪ್ರತಿ ಲೀಟರ್ 87.14 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 82.05 ರೂ. ಹಾಗೂ ಡೀಸೆಲ್ ದರ 75.52 ರೂ. ಇದೆ. ಚೆನ್ನೈನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ಗೆ 83.59 ರೂ. ಇದ್ದರೆ, ಬೆಲೆ 77.44 ರೂ. ಆಗಿದೆ.








