ಕರ್ನಾಟಕದಲ್ಲಿ ಪೆಟ್ರೋಲ್ ಸೆಂಚೂರಿ : ಜಿಲ್ಲಾವಾರು ಬೆಲೆ ಎಷ್ಟಿದೆ..?
ಬೆಂಗಳೂರು : ದೇಶದಲ್ಲಿ ಕೊರೊನಾ ಸಂಕಷ್ಟದ ಮಧ್ಯೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ.
ಇದರ ಪರಿಣಾಮ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆ 100 ರೂ. ಗಡಿ ದಾಟಿದೆ. ಉತ್ತರ ಕನ್ನಡ, ಬಳ್ಳಾರಿ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ದರ ಶತಕ ಬಾರಿಸಿದೆ.
ಕರ್ನಾಟಕದ ಉತ್ತರ ಕನ್ನಡದ ಶಿರಸಿ, ಬಳ್ಳಾರಿ, ಚಿಕ್ಕಮಗಳೂರಿನಲ್ಲಿ ಪೆಟ್ರೋಲ್ ಬೆಲೆ 100 ರೂ. ದಾಟಿದೆ. ಶಿರಸಿ ಸೇರಿದಂತೆ ಮಲೆನಾಡು ಭಾಗದಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 100.24 ರೂ. ಆಗಿದೆ.
ಕರಾವಳಿ ಭಾಗದಲ್ಲೂ ಪೆಟ್ರೋಲ್ ದರ 100 ರೂ. ಸಮೀಪಿಸುತ್ತಿದೆ. ಕಾರವಾರದಲ್ಲಿ 99.86 ರೂ. ಇದೆ. ಡೀಸೆಲ್ ಬೆಲೆಯೂ ಏರಿಕೆಯಾಗುತ್ತಿದ್ದು, ಶಿರಸಿಯಲ್ಲಿ 92.88 ರೂ.ಗೆ ಏರಿಕೆಯಾಗಿದೆ.
ಇನ್ನು ಚಿಕ್ಕಮಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 100.06 ರೂ. ಆಗಿದೆ. ಬಳ್ಳಾರಿಯಲ್ಲಿ 1 ಲೀಟರ್ ಪೆಟ್ರೋಲ್ ಗೆ 100.10 ರೂ. ಆಗಿದೆ.
ಬೆಂಗಳೂರಿನಲ್ಲೂ ಪೆಟ್ರೋಲ್ ಬೆಲೆ 99 ರೂ. ಗಡಿಯಲ್ಲಿದ್ದು, ಮುಂದಿನ ವಾರದೊಳಗೆ ಶತಕ ಬಾರಿಸುವ ಸಾಧ್ಯತೆಯಿದೆ.