ಬೆಲೆ ಕಡಿಮೆ ಮಾಡಿ ಜನರ ಹೊರೆ ತಪ್ಪಿಸಲಾಗುವುದಿಲ್ಲ : ಸತೀಶ್ ಜಾರಕಿಹೊಳಿ sathish jarakiholi
ಚಿಕ್ಕೋಡಿ: ಬೆಲೆ ಕಡಿಮೆ ಮಾಡಿದ್ದು, ಜನರ ಹೊರೆ ತಪ್ಪಿಸಲು ಆಗುವುದಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ನಿನ್ನೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡಿವೆ.
ಈ ಬಗ್ಗೆ ಹುಕ್ಕೇರಿ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇನ್ನೂ ಕಡಿಮೆಯಾಗಬೇಕು.
ಇದು ದೀಪಾವಳಿ ಗಿಫ್ಟ್ ಅಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಲೆ ಕಡಿತವನ್ನು ಬೆಲೆ ಕಡಿಮೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ಬೆಲೆ ಕಡಿಮೆ ಮಾಡಿದ್ದು, ಜನರ ಹೊರೆ ತಪ್ಪಿಸಲು ಆಗುವುದಿಲ್ಲ ಎಂದಿದ್ದಾರೆ.
ಇದೇ ವೇಳೆ ಹಾನಗಲ್ ನಲ್ಲಿ ಬಿಜೆಪಿಯ ಸೋಲಿನ ಬಗ್ಗೆ ಮಾತನಾಡಿ, ಅಲ್ಲಿ ಬಿಜೆಪಿ ಸೋಲಿನ ಹೊಣೆಯನ್ನು ಸಿಎಂ ಮಾತ್ರವಲ್ಲ ಇಡೀ ಪಕ್ಷ ಹೊರಬೇಕು ಎಂದಿದ್ದಾರೆ.









