ನವದೆಹಲಿ: ಕಳೆದ 13 ದಿನಗಳಲ್ಲಿ ಸತತವಾಗಿ 11 ಬಾರಿ ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ಮತ್ತೆ ತೈಲ ಬೆಲೆ ಏರಿಕೆಯಾಗಿದೆ. ಆಗಸ್ಟ್ 16ರಿಂದ ಪೆಟ್ರೋಲ್ ಬೆಲೆ ಏರಿಕೆ ಆರಂಭವಾಗಿದ್ದು, ತನ್ನ ಓಟವನ್ನು ಮುಂದುವರೆಸಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆ ಬ್ಯಾರೆಲ್ ಗೆ 46 ಡಾಲರ್ ನಷ್ಟಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 10 ಪೈಸೆ ಹೆಚ್ಚಳವಾಗಿದೆ. ಇನ್ನೂ ಪ್ರಮುಖ ಮೆಟ್ರೋ ಸಿಟಿಗಳಾದ ಕೋಲ್ಕತಾ, ಮುಂಬೈ ಮತ್ತು ಚೆನ್ನೈನಲ್ಲಿ ಲೀಟರ್ ಗೆ 9 ಪೈಸೆ ಹೆಚ್ಚಾಗಿದೆ.
ಆಗಸ್ಟ್ 16ರಂದು ಪ್ರತಿ ಲೀಟರ್ ಪೆಟ್ರೋಲ್ ಮೇಲೆ 14 ಪೈಸೆ, ಆಗಸ್ಟ್ 17ರಂದು 16 ಪೈಸೆ, ಆಗಸ್ಟ್ 18ರಂದು 17 ಪೈಸೆ ಏರಿಸಲಾಯಿತು. ಆಗಸ್ಟ್ 19ರಂದು ಯಾವುದೇ ರೀತಿಯ ಬೆಲೆ ಏರಿಕೆ ಆಗಿರಲಿಲ್ಲ. ಮತ್ತೆ ಆಗಸ್ಟ್ 20ರಿಂದ ಬೆಲೆ ಏರಿಕೆ ಆರಂಭವಾಗುತ್ತಲೆ ಇದೆ.