Petromax
ಸತೀಶ್ ನೀನಾಸಂ ನಟನೆಯ ಪೆಟ್ರೋಮ್ಯಾಕ್ಸ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಅದು ಕೂಡ ಕೇವಲ 12 ದಿನಗಳಲ್ಲಿ ಅನ್ನೋದು ವಿಶೇಷ. ಕಳೆದ ಎರಡು ವಾರಗಳಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗುತ್ತಿತ್ತು. ಕೇವಲ 12 ದಿನದಲ್ಲಿ ಮೊದಲ ಶೆಡ್ಯೂಲ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಚಿತ್ರದಲ್ಲಿ “ಉಗ್ರಂ” ಬೆಡಗಗಿ ಹರಿಪ್ರಿಯಾ ನಿನಾಸಂಗೆ ಜೋಡಿಯಾಗಿದ್ದಾರೆ. ವಿಜಯ್ ಪ್ರಸಾದ್ ಸಾರಥ್ಯದಲ್ಲಿ ತಯಾರಾಗುತ್ತಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಮೊದಲ ಹಂತದ ಶೂಟಿಂಗ್ ಮುಕ್ತಾಯವಾಗಿದೆ.
ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಕಲಾವಿದರಿಗೆ ನಿರ್ದೇಶಕ ವಿಜಯ್ ಪ್ರಸಾದ್ ಖುಷಿಯಿಂದ ಬೀಳ್ಕೊಡುಗೆ ನೀಡಿದ್ದಾರೆ. ಮೊದಲ ಹಂತದ ಶೂಟಿಂಗ್ ನಲ್ಲಿ ಸತೀಶ್ ನೀನಾಸಂ, ಹರಿಪ್ರಿಯಾ, ನಾಗಭೂಷಣ, ಕಾರುಣ್ ರಾಮ್ ಭಾಗವಹಿಸಿದ್ದರು. ಈ ಹಿಂದೆಯೇ ‘ಪೆಟ್ರೋಮ್ಯಾಕ್ಸ್’ ಸಿನಿಮಾ ಘೋಷಣೆಯಾಗಿತ್ತು. ಆದರೆ ‘ಸಿದ್ಲಿಂಗು’ ಸಿನಿಮಾ ರಿಲೀಸ್ ಆದ ಬಳಿಕ ಈ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಈ ಪ್ರಾಜೆಕ್ಟ್ ಅಲ್ಲಿಗೆ ಮೂಲೆ ಸೇರಿತ್ತು. ಬಳಿಕ ವಿಜಯ್ ಪ್ರಸಾದ್ ‘ಪರಿಮಳ ಲಾಡ್ಜ್’ ಸಿನಿಮಾ ಅನೌನ್ಸ್ ಮಾಡಿದ್ರು. ಅಲ್ಲದೆ ಟೀಸರ್ ಅನ್ನು ರಿಲೀಸ್ ಮಾಡಿದ್ದಾರೆ. ಇದೀಗ ‘ಪರಿಮಳ ಲಾಡ್ಜ್’ ಟೇಕಾಫ್ ಆಗುವ ಮೊದಲೇ ಪೆಟ್ರೇಮ್ಯಾಕ್ಸ್ ಸಿನಿಮಾ ಪ್ರಾರಂಭಿಸಿದ್ದಾರೆ. ಈ ಚಿತ್ರದಲ್ಲಿ ಕಾರುಣ್ ರಾಮ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸದ್ಯ ಸತೀಶ್ ನಿನಾಸಂ ಅವರು ಪೆಟ್ರೋಮ್ಯಾಕ್ಸ್ ಹೊರತಾಗಿ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅದ್ರಲ್ಲಿ ಒಂದು “ಮ್ಯಾಕ್ಸಿ”. ಈ ಚಿತ್ರದಲ್ಲಿ “ಅಯೋಗ್ಯ”ದಲ್ಲಿ ಮಿಂಚಿದ್ದ ಜೋಡಿ ಮತ್ತೆ ಒಂದಾಗಿದೆ. ಅಂದ್ರೆ ಸತೀಶ್ ನಿನಾಸಂಗೆ ರಚಿತಾ ರಾಮ್ ಜೋಡಿಯಾಗಿದ್ದು, ಚಿತ್ರದ ಫಸ್ಟ್ ಲುಕ್ ಕೂಡ ಈಗಾಗಲೇ ಅನಾವರಣಗೊಂಡಿದೆ. ಅಲ್ಲದೇ ರಚಿತಾ ಹಾಗೂ ನಿನಾಸಂ ಲುಕ್ ವಿಭಿನ್ನವಾಗಿದ್ದು ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮತ್ತೊಂದೆಡೆ ಗ್ಲಾಮರಸ್ ಬ್ಯೂಟಿ ಹರಿಪ್ರಿಯಾ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ತೆಲುಗಿನ ಎವರು ರೀಮೇಕ್, ಅಮೃತಮತಿ ಸೇರಿದಂತೆ ಹಲವು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.
Petromax
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel