ಗಮನಿಸಿ : PF ಬಡ್ಡಿ ದರದ ಸಂಬಂಧ ಗುಡ್ ನ್ಯೂಸ್ ಕೊಟ್ಟ EPFO
ಉದ್ಯೋಗದಲ್ಲಿರುವ ಜನರಿಗೆ ದೊಡ್ಡ ಗುಡ್ ನ್ಯೂಸ್ ಒಂದು ಸಿಕ್ಕಿದೆ.. ನೌಕರರು ಈಗಲೂ ಪಿಎಫ್ ಖಾತೆಯಲ್ಲಿ ಬಡ್ಡಿಯನ್ನು ಪಡೆಯಲು ಕಾಯುತ್ತಿದ್ದು, ಬಡ್ಡಿ ಹಣವನ್ನು ಶೀಘ್ರವೇ ಖಾತೆಗೆ ವರ್ಗಾಯಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ನಡುವೆ ಬಡ್ಡಿಗೆ ಸಂಬಂಧಿಸಿದಂತೆ ಇಪಿಎಫ್ಒ ಮಹತ್ವದ ಘೋಷಣೆ ಮಾಡಿದೆ.
ಶೀಘ್ರದಲ್ಲೇ ಸಂಪೂರ್ಣ ಬಡ್ಡಿ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗುವುದು. ಇಪಿಎಫ್ ಒನ 6 ಕೋಟಿ ಖಾತೆದಾರರು, ಪಿಎಫ್ ಬಡ್ಡಿ ಹಣವನ್ನು ಜುಲೈ ಅಂತ್ಯದ ವೇಳೆಗೆ ಖಾತೆಗೆ ವರ್ಗಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದರು. ಆದರೆ ಜುಲೈ 31 ರವರೆಗೆ ಇಪಿಎಫ್ಒ ಹಣವನ್ನು ವರ್ಗಾಯಿಸಲಿಲ್ಲ. ಈಗ ಪಿಎಫ್ ಖಾತೆದಾರರು, ಆಗಸ್ಟ್ ತಿಂಗಳಲ್ಲಿ ವರ್ಗಾಯಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಪಿಎಫ್ಒ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ.
ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 44,643 ಕೇಸ್ ಪತ್ತೆ, 464 ಜನ ಸಾವು
ಟ್ವಿಟರ್ನಲ್ಲಿ ಖಾತೆದಾರರೊಬ್ಬರು ಇಪಿಎಫ್ಒ ಟ್ವೀಟ್, ಟ್ಯಾಗ್ ಮಾಡಿದ್ದಾರೆ. ಇದ್ರಲ್ಲಿ ಯಾವಾಗಾ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ಪ್ರಶ್ನೆಗೆ ಇಪಿಎಫ್ಒ ಉತ್ತರ ನೀಡಿದೆ. ಯಾವಾಗ ಬಡ್ಡಿಯನ್ನು ಖಾತೆಗೆ ಜಮಾ ಮಾಡಲಾಗುತ್ತದೆಯೋ ಆಗ ಒಟ್ಟಿಗೆ ಜಮಾ ಮಾಡಲಾಗುತ್ತದೆ. ಸಂಪೂರ್ಣ ಮೊತ್ತವನ್ನು ನೀಡಲಾಗುವುದು.
ಬಡ್ಡಿಯ ಕಾರಣದಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದು ಉತ್ತರಿಸಲಾಗಿದೆ. ಆದರೆ ಬಡ್ಡಿ ಹಣವನ್ನು ಯಾವಾಗ ಪಿಎಫ್ ಖಾತೆಗೆ ವರ್ಗಾಯಿಸಲಾಗುವುದು ಎಂದು ಇಪಿಎಫ್ಒ ಹೇಳಿಲ್ಲ. 2020-21ರ ಆರ್ಥಿಕ ವರ್ಷಕ್ಕೆ ಸರ್ಕಾರವು ಶೇಕಡಾ 8.5 ಬಡ್ಡಿ ದರವನ್ನು ನಿಗದಿಪಡಿಸಿದೆ. ಉದ್ಯೋಗದಲ್ಲಿರುವ ಜನರಿಗೆ ಹೂಡಿಕೆ ಮಾಡಲು ಮತ್ತು ಉಳಿಸಲು ಪಿಎಫ್ ಖಾತೆಯು ಉತ್ತಮ ಮಾರ್ಗವಾಗಿದೆ. ಈ ಮೂಲಕ ಉಳಿಸಿದ ಹಣವನ್ನ ಬಡ್ಡಿಯ ಜೊತೆಗೆ ಇಪಿಎಫ್ಒ ಕಾಲಕಾಲಕ್ಕೆ ಖಾತೆಗೆ ವರ್ಗಾಯಿಸುತ್ತದೆ.