PFI ನಿಷೇಧದಿಂದ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ
ಬೆಂಗಳೂರು : ಪಿಎಫ್ಐ ನಿಷೇಧದಿಂದ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಪಿಎಫ್ಐ ಸಂಘಟನೆಯ ಕಬಂಧಬಾಹು ವಿಸ್ತರಿಸಲು ಕಾಂಗ್ರೆಸ್ ಆಡಳಿತವೇ ಕಾರಣ.
ಸಮಾಜಘಾತಕ ಶಕ್ತಿಗಳನ್ನು ಮಟ್ಟಹಾಕಲು ಸದಾ ಬದ್ಧತೆ ಹೊಂದಿರುವ ನಮ್ಮ ಬಸವರಾಜ ಬೊಮ್ಮಾಯಿ ಸರ್ಕಾರವು, ಭಯೋತ್ಪಾದಕ ಕೃತ್ಯಗಳಲ್ಲಿ ಭಾಗಿಯಾದವರನ್ನು ಜೈಲಿಗೆ ಅಟ್ಟುವ ಮೂಲಕ ಬದ್ಧತೆ ಮೆರೆದಿದೆ.
ಪಿಎಫ್ಐ ನಿಷೇಧದಿಂದ ಕಾಂಗ್ರೆಸ್ ಒಳಗೊಳಗೆ ಕುದಿಯುತ್ತಿದೆ. ಆದರೆ ರೋಷವನ್ನು ಹೊರಗೆ ಹಾಕಿದರೆ ಜನವಿರೋಧ ಎದುರಿಸಬೇಕಾಗುತ್ತದೆ ಎಂದು ನಾಟಕೀಯವಾಗಿ ಮಾತನಾಡುತ್ತಿದೆ.
ಜೆಡಿಎಸ್ ಪಕ್ಷದ #LuckyDipCMHDK ಕೂಡಾ ನಾಜೂಕಾಗಿ ಪಿಎಫ್ಐ ಪರ ಮಾತನಾಡುತ್ತಿದ್ದಾರೆ. ಈ ಚಿತ್ರವೊಂದೇ ಸಾಕು, ಎಲ್ಲವನ್ನೂ ತೆರೆದಿಡುತ್ತದೆ!
ಕೇರಳದ ಕಾಂಗ್ರೆಸ್ ಸರ್ಕಾರ ಪಿಎಫ್ಐ ನಿಷೇಧಿಸಲು ಕೇಂದ್ರಕ್ಕೆ ಮನವಿ ಮಾಡಿದ ಮೇಲೂ ಕಾಂಗ್ರೆಸ್ ಸರ್ಕಾರ ಪಿಎಫ್ಐ ಮೇಲಿನ ಪ್ರಕರಣಗಳನ್ನು ವಾಪಾಸ್ ಪಡೆದಿತ್ತು.
ಅಲ್ಲದೆ, ದೇಶದ್ರೋಹಿ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿತ್ತು ಎಂದು ಬರೆದುಕೊಂಡಿದೆ.