PFI ಬ್ಯಾನ್ ಬಗ್ಗೆ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ
ಬೆಳಗಾವಿ : ದೇಶದಲ್ಲಿ ಉಗ್ರ ಚಟುವಟಿಕೆ ಹಾಗೂ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ ಬ್ಯಾನ್ ಆಗಿವೆ ಎಂದು ಪಿಎಫ್ ಐ ಬ್ಯಾನ್ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ಕಾಗವಾಡದ ಕೆಂಪವಾಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ದೇಶದಲ್ಲಿ ಉಗ್ರ ಚಟುವಟಿಕೆ ಹಾಗೂ ಅಶಾಂತಿ ನಿರ್ಮಾಣ ಮಾಡುವ ಸಂಘಟನೆ ಬ್ಯಾನ್ ಆಗಿವೆ.
ಇಂತಹ ಸಂಘಟನೆಗಳು ಬ್ಯಾನ್ ಆಗಿದ್ದು ಸಂತೋಷ, ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದಿದ್ದಾರೆ.
ಧಾರ್ಮಿಕ ಸಂಘಟನೆಗಳ ಹೆಸರಲ್ಲಿ ಭಯೋತ್ಪಾನ ಚಟುವಟಿಕೆ ನಡೆದಿತ್ತು, ಹತ್ಯೆಗಳನ್ನ ಮಾಡುವುದು,
ವಿದೇಶದಿಂದ ಹಣ ತಂದು ಅದರ ದುರುಪಯೋಗ ಮಾಡುವುದು, ಪ್ರಧಾನಿಯವರ ಹತ್ಯೆಗೆ ಪ್ರಯತ್ನ ಮಾಡುವುದು,
ಸಂಘಟನೆಗಳ ಉದ್ದೇಶ ಆಗಿತ್ತು. ಯಾರೇ ರಾಷ್ಟ್ರದ್ರೋಹ ಮಾಡಿದ್ರೂ ಸಹ ಅದಕ್ಕೆ ಜಾತಿ, ಧರ್ಮದ ಕಟ್ಟಳೆಗಳಿಲ್ಲ.
ಯಾರೇ ದೇಶದ್ರೋಹದ ಕೆಲಸ ಮಾಡಿದ್ರೂ ಸಹ ಕ್ರಮ ಕೈಗೊಳ್ಳುತ್ತೇವೆ. ಕಳೆದ ೮ ವರ್ಷಗಳ ಅಧ್ಯಯನ ಮಾಡಿ ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ.
ಎಲ್ಲಾ ರಾಜ್ಯಗಳಲ್ಲೂ ಸಹ ಒಂದು ತನಿಖೆ ಮಾಡಿಯೇ ಈ ನಿರ್ಧಾರ ಮಾಡಿದೆ ಎಂದು ತಿಳಿಸಿದ್ದಾರೆ.