PFI ನಾಯಕರ ಹಿಟ್ ಲೀಸ್ಟ್ ನಲ್ಲಿ RSS ನಾಯಕರು – ಕೇಂದ್ರದಿಂದ Y ಕೆಟಗರಿ ಭದ್ರತೆ…
ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಹಿಟ್ ಲಿಸ್ಟ್ನಲ್ಲಿ ಕೇರಳದ ಐವರು ಆರ್ಎಸ್ಎಸ್ ನಾಯಕರಿದ್ದಾರೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗಮನಕ್ಕೆ ಬಂದಿದೆ. ಸಂಭಾವ್ಯ ಬೆದರಿಕೆಯನ್ನು ಗ್ರಹಿಸಿದ ಗೃಹ ಸಚಿವಾಲಯವು ಈ ನಾಯಕರಿಗೆ “ವೈ” ವರ್ಗದ ಭದ್ರತೆ ಒದಗಿಸುವುದಾಗಿ ತಿಳಿಸಿದೆ.
ಮೂಲಗಳ ಪ್ರಕಾರ, PFI ಸಂಘಟನೆ ಮೇಲೆ ನಡೆಸಿದ ದಾಳಿಯ ವೇಳೆ ಕೇರಳದ ಸದಸ್ಯ ಮೊಹಮ್ಮದ್ ಬಶೀರ್ ಅವರ ಮನೆಯಿಂದ ಎನ್ಐಎ ಈ ಪಟ್ಟಿಯನ್ನ ಪತ್ತೆ ಮಾಡಿದೆ, ನಿಷೇಧದ ನಂತರ ಪಿಎಫ್ಐನ ಹಿಟ್ ಲಿಸ್ಟ್ನಲ್ಲಿ ಕೇರಳದ ಐವರು ಆರ್ಎಸ್ಎಸ್ ನಾಯಕರು ಇದ್ದಾರೆ ಎಂಬ ಮಾಹಿತಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್ಐಎ) ಸಿಕ್ಕಿದೆ. ಎನ್ಐಎ ಈ ವಿಷಯವನ್ನು ಗೃಹ ಸಚಿವಾಲಯದೊಂದಿಗೆ ಹಂಚಿಕೊಂಡಿದ್ದು, ನಂತರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಎನ್ಐಎ ಮತ್ತು ಇಂಟೆಲಿಜೆನ್ಸ್ ಬ್ಯೂರೋ (ಐಬಿ) ವರದಿಗಳ ಆಧಾರದ ಮೇಲೆ ಕೇರಳದ ಐವರು ಆರ್ಎಸ್ಎಸ್ ನಾಯಕರಿಗೆ “ವೈ” ವರ್ಗದ ಭದ್ರತೆಯನ್ನು ಒದಗಿಸಲು ಗೃಹ ಸಚಿವಾಲಯ ನಿರ್ಧರಿಸಿದೆ. ಆರ್ಎಸ್ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು.
ಭದ್ರತೆ ಮತ್ತು ಭಯೋತ್ಪಾದಕ ಸಂಘಟನೆಗಳ ಸಂಬಂಧ ಉಲ್ಲೇಖಿಸಿ ಕೇಂದ್ರ ಸರ್ಕಾರ ಬುಧವಾರ ಪಿಎಫ್ಐ ಮತ್ತು ಅದರ ಮಿತ್ರಪಕ್ಷಗಳನ್ನು ಐದು ವರ್ಷಗಳ ಕಾಲ ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ಒಟ್ಟು ಒಂಬತ್ತು ಸಂಸ್ಥೆಗಳನ್ನು “ಕಾನೂನುಬಾಹಿರ” ಎಂದು ಘೋಷಿಸಲಾಗಿದೆ.








