ಪಿಎಚ್ ಡಿ ಪೀಕಲಾಟ : ಇಂದು ಬೆಂಗಳೂರು ವಿವಿ ಬಂದ್ !

1 min read
bengaluru vv saakshatv

ಪಿಎಚ್ ಡಿ ಪೀಕಲಾಟ : ಇಂದು ಬೆಂಗಳೂರು ವಿವಿ ಬಂದ್ !

PhD students protest in Bangalore University

bengaluru vv karnataka saakshatvಬೆಂಗಳೂರು: ಬೆಂಗಳೂರು ವಿವಿಯಲ್ಲಿ ಪಿಹೆಚ್ ಡಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಆರೋಪಿಸಿ ಇಂದು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ.

2018ರಿ ಪಿಎಚ್ ಡಿ ಪ್ರವೇಶಾತಿ ಪ್ರಕ್ರಿಯೆ ನಡೆಯುತ್ತಿದ್ದು, ಇದರಲ್ಲಿ ಕುಲಪತಿ ವೇಣುಗೋಪಾಲ್ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಅಲ್ಲದೆ ಇದನ್ನ ಖಂಡಿಸಿ ನಾಳೆ ಬೆಂಗಳೂರು ವಿವಿ ಬಂದ್ ನಡೆಸಲಿದ್ದಾರೆ. ಈ ಹಿನ್ನೆಲೆ
ವಿವಿಯ ಎಲ್ಲಾ ವಿಭಾಗಾಗಳು ಬಂದ್ ಆಗಲಿವೆ ಎಂದು ತಿಳಿದುಬಂದಿದೆ.
ಕುಲಪತಿ ವೇಣುಗೋಪಾಲ್ ಅವ್ರು ಯುಜಿಸಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಪಿಹೆಚ್ ಡಿ ಪ್ರವೇಶಾತಿ ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಪಿಎಚ್ ಡಿ ಪ್ರವೇಶಾತಿ ಪ್ರಕ್ರಿಯೆ ಬಗ್ಗೆ ಕುಲಪತಿಗಳ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಇಂದು ಬೆಳಿಗ್ಗೆ 11ಗಂಟೆಗೆ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಲಿದ್ದಾರೆ.

PhD students protest in Bangalore University
ರಾಜ್ಯದ ಯಾವುದೇ ವಿವಿಗಳಲ್ಲಿ ಅನುಸರಿಸದ ಅವೈಜ್ಞಾನಿಕ ಪದ್ದತಿಯನ್ನು ಅನುಸರಿಸಿ ಕೌನ್ಸಿಲಿಂಗ್ ನಡೆಸಲಾಗುತ್ತಿದೆ. ಮೀಸಲಾತಿ ವಿನಾಯ್ತಿಯ ನಿಯಮಗಳನ್ನು ಉಲ್ಲಂಘಿಸಿ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗಿದೆ.

ಸಾಮಾನ್ಯವಾಗಿ ಯುಜಿಸಿ ನಿಯಮಾವಳಿಗಳ ಪ್ರಕಾರ ಪ್ರತಿ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಸಾಮಾನ್ಯ ವರ್ಗಕ್ಕೆ 55%, ಹಿಂದುಳಿದ ವರ್ಗಗಳಿಗೆ 50% ಮತ್ತು ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ 45% ಅರ್ಹತಾ ಅಂಕಗಳನ್ನು ನಿಗದಿಪಡಿಸಬೇಕು. ಆದರೆ ಬೆಂಗಳೂರು ವಿವಿಯಲ್ಲಿ ಯಾವುದೇ ವಿನಾಯ್ತಿ ನೀಡದೆ ಪ್ರವೇಶಾತಿ ಪ್ರಕ್ರಿಯೆ ನಡೆಸಲಾಗುತ್ತಿದೆ ಅನ್ನೋದು ವಿದ್ಯಾರ್ಥಿಗಳ ಆರೋಪವಾಗಿದೆ.

ಈ ಎಲ್ಲ ಲೋಪಗಳನ್ನು ಆರೋಪ ಸರಿಪಡಿಸಿ ಶೀಘ್ರದಲ್ಲೆ ಪ್ರವೇಶಾತಿ ಪ್ರಕ್ರಿಯೆ ನಡೆಸಬೇಕು ಎಂದು ವಿಧ್ಯಾರ್ಥಿಗಳು ಒತ್ತಾಯಿಸಿದ್ದಾರೆ. ಬೇಡಿಕೆಗಳು ಈಡೇಸದಿದ್ದಲ್ಲಿ ಸಾಂಕೇತಿಕ ಪ್ರತಿಭಟನೆಯನ್ನು ಅನಿರ್ಧಿಷ್ಟಾವಧಿಗೆ ವಿಸ್ತರಿಸಲು ವಿಧ್ಯಾರ್ಥಿಗಳು ತೀರ್ಮಾನ ಮಾಡಿದ್ದಾರೆ.

@PhD students protest @Bangalore University #saakshatv #karnataka #bengaluru #students

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd