ಬಾಹ್ಯಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಉಡಾವಣೆ ಮಾಡಿದ್ದ ಚಂದ್ರಯಾನ 3 ಮಿಷನ್ ತನ್ನ ಪ್ರಮುಖ ಮೈಲಿಗಲ್ಲಿನ ಹತ್ತಿರಕ್ಕೆ ತೆರಳಿದೆ.
ವಿಕ್ರಮ್ ಲ್ಯಾಂಡರ್ ಆಗಸ್ಟ್ 23ರ ಬುಧವಾರ ಚಂದ್ರನ ಮೇಲೆ ಇಳಿಯಲು ತಯಾರಿ ನಡೆಸುತ್ತಿದ್ದರೆ, ಇಸ್ರೋ ಅಂತಿಮ ಡಿ-ಬೂಸ್ಟಿಂಗ್ ಪ್ರಕ್ರಿಯೆ ಪೂರ್ಣಗೊಳಿಸಿದೆ.
ವಿಕ್ರಮ್ ಲ್ಯಾಂಡರ್ ಡಿ-ಬೂಸ್ಟಿಂಗ್ನೊಂದಿಗೆ ಕಕ್ಷೆ ಕಡಿಮೆ ಮಾಡುತ್ತಿದೆ. ಲ್ಯಾಂಡರ್ 25km x 134km ಕಕ್ಷೆ ಪ್ರವೇಶಿಸಿದೆ. ಚಂದ್ರಯಾನ್ 3 ಮಿಷನ್ ಯಶಸ್ವಿಯಾದರೆ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ನಲ್ಲಿ ಭಾರತ ಇತಿಹಾಸ ನಿರ್ಮಿಸುವ ಸಾಧ್ಯತೆ ಇದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈಗಾಗಲೇ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗಿವೆ.
ಚಂದ್ರನ ಮೇಲ್ಮೈಯಲ್ಲಿ 14 ದಿನಗಳವರೆಗೆ ಇರುತ್ತದೆ. ಮೇಲ್ಮೈ ಉದ್ದಕ್ಕೂ ನೀರಿನ ಕುರುಹಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತದೆ. ಜುಲೈ 14 ರಂದು ಭಾರತೀಯ ಬಾಹ್ಯಕಾಶ ಸಂಸ್ಥೆ-ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಚಂದ್ರಯಾನ-3 ಉಡಾವಣೆ ಮಾಡಿದೆ.