Physical assault -ಇತ್ತಿಚಿನ ದಿನ ಮಾನದಲ್ಲಿ ಹೆಚ್ಚುತ್ತಿರು ಅಪರಾದಗಳು ಹೆಚ್ಚುತ್ತಿರುವ ಬೆನ್ನಲೆ ಈ ಅಪರಾಧದ ಸಾಲಿಗೆ ಪುಟ್ಟಮಕ್ಕಳು ಹೋರತಾಗಿಲ್ಲ.
ಈ ಕೃತ್ಯಕ್ಕೆ ಪೂರಕದಂತೆ ಇಂದು 6 ವರ್ಷದ ಗಂಡುಮಗುವಿನ ಮೇಲೆ ದೈಹಿಕ ಹಲ್ಲೆಯೋಂದು ನಡೆದಿದೆ.
ಹೌದು 28 ವರ್ಷದ ಕಾಮುಕ ಯುವಕನೊಬ್ಬ ತನ್ನ ಪರಿಚಯದಲ್ಲಿದ್ದ 6 ವರ್ಷದ ಪುಟ್ಟ ಗಂಡುಮಗುವಿನ ಮೇಲೆ ದೈಹಿಕ ಸಂಭೋಗ ನಡೆಸಿ ತನ್ನ ವಿಕೃತಿಯನ್ನು ಮೆರೆದಿದ್ದಾನೆ.
ಈ ಘಟನೆಯು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹಿಣಿ ಗ್ರಾಮದಲ್ಲಿ ನಡೆದಿದೆ, ಆರೋಪಿಯು ಮೀನುಗಾರಿಕೆ ನಡೆಸುವ ವನ್ನಳ್ಳಿಯ ಖಾಸಿಂ ಎಂದು ಗುರುತಿಸಲಾಗಿದೆ.
ಆಟವಾಡುತಿದ್ದ ಸಮಯದಲ್ಲಿ 6 ವರ್ಷದ ಗಂಡುಮಗುವನ್ನು ಪುಸಲಾಯಿಸಿ ನಿರ್ಜನ ಪ್ರದೇಶಕ್ಕೆ ಮಗುವನ್ನು ಕರೆದೊಯ್ದು ಕೃತ್ಯ ಎಸಗಿದ್ದಾನೆ ಎಂದು ತಿಳಿದಿದೆ.
ಈ ಪ್ರಕರಣವು ಕಾರವಾರದ ಮಕ್ಕಳ ಸ್ನೇಹಿ ನ್ಯಾಯಾಲಯದಲ್ಲಿ ಈ ಪ್ರಕರಣ ದಾಕಲಾಗಿದ್ದು ವಾದ-ವಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಖಾಸಿಂಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿದ್ದಾರೆ.