ಶೀಘ್ರದಲ್ಲೇ ಬಿಡುಗಡೆಯಾಗಲಿವೆ ಕರೋನಾ ಮಾತ್ರೆಗಳು!!!!
ಕರೋನಾ ರೋಗದ ವಿರುದ್ಧ ಹೋರಾಡಲು ಕೆಲವೇ ದಿನಗಳಲ್ಲಿ ಮಾತ್ರೆಗಳು ಸಹ ಮಾರುಕಟ್ಟೆಗೆ ಬರಲಿವೆ. ಅಮೇರಿಕಾದ ಮೆರ್ಕ್ ಕಂಪನಿಯೊಂದು ಮೊಲ್ನುಪಿರವಿರ್ ಎಂಬ ಹೆಸರಿನ ಕೋವಿಡ್ ಮಾತ್ರೆ ಬಿಡುಗಡೆ ಮಾಡಿದೆ. ಕೆಲವೇ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿಯೂ ಸಹ ಈ ಮಾತ್ರೆ ಬಿಡುಗಡೆಯಾಗಲಿದೆ.
ಬ್ರಿಟನ್ ಔಷಧವನ್ನ ಮೊದಲ ಭಾರಿಗೆ ಅನುಮೋದಿಸಿದೆ. ಕೋವಿಡ್ ಪಾಸಿಟಿವ್ ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡ ಐದು ದಿನಗಳೊಳಗೆ ಈ ಔಷಧಿಯನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ.
ಇಲ್ಲಿಯವರೆಗೆ ಕೋವಿಡ್ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡಲು ಲಸಿಕೆಗಳ ಮೇಲೆ ಅವಲಂಬಿತವಾಗಿದ್ದೇವೆ. ಇನ್ನು ಮುಂದೆ ಆಂಟಿವೈರಲ್ ಔಷಧಿ ಮಾತ್ರೆಗಳು ಬದಲಾವಣೆಯನ್ನ ತರಲಿವೆ. ಮತ್ತು ಸಾಂಕ್ರಾಮಿಕ ರೋಗವು ಸ್ಥಳೀಯವಾಗಿ ಪಸರಿಸುವುದನ್ನ ತಡೆಗಟ್ಟುವಲ್ಲಿ ಇವುಗಳು ವ್ಯಾಕ್ಸಿನೇಷನ್ಗಿಂತ ಹೆಚ್ಚು ಪರಿಣಾಮಕಾರಿಯಾಗಿವೆ. ಎಂದು ಕೋವಿಡ್ ಸ್ಟ್ರಾಟಜಿ ಗ್ರೂಪ್ನ ಅಧ್ಯಕ್ಷ ಡಾ. ರಾಮ್ ವಿಶ್ವಕರ್ಮ ಹೇಳಿದ್ದಾರೆ.








