ನಂದ ಕಿಶೋರ್ ಈಗ ಫಿಟ್ & ಫೈನ್..! 253 -133 = 120 ಕೆಜಿ..!

1 min read

ಬರೋಬ್ಬರಿ 133 ಕೆಜಿ ಬೊಜ್ಜು ಕರಗಿಸಿದ ನಂದ ಕಿಶೋರ್ ..!

ನಿರ್ದೇಶಕ ನಂದ ಕಿಶೋರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಪೋಗರು ಚಿತ್ರದ ನಂತರ ರಾಣಾ ಚಿತ್ರದ ನಿರ್ದೇಶನ ಜವಾಬ್ದಾರಿಯನ್ನು ವಹಿಸಿಕೊಂಡಿರುವ ನಂದ ಕಿಶೋರ್ ಅವರು ಈಗ ಫಿಟ್ ನೆಸ್ ಮೂಲಕ ಗಮನ ಸೆಳೆದಿದ್ದಾರೆ. ವಿಕ್ಟರಿ, ಅಧ್ಯಕ್ಷ, ರನ್ನ, ಮುಕುಂದ ಮುರಾರಿ, ಟೈಗರ್, ಬೃಹಸ್ಪತಿ, ಪೊಗರು ಚಿತ್ರದ ಯಶಸ್ವಿನ ನಂತರ ನಂದ ಕಿಶೋರ್ ಅವರು ತನ್ನ ಅತೀಯಾದ ದೇಹ ತೂಕವನ್ನು ಇಳಿಸಿಕೊಳ್ಳುವತ್ತ ಚಿತ್ತವನ್ನಿಟ್ಟಿದ್ದಾರೆ. ಹೌದು, 253 ಕೆಜಿ ದೇಹ ತೂಕವನ್ನು ಹೊಂದಿದ್ರೂ ಕೂಡ ನಂದ ಕಿಶೋರ್ ಲವಲವಿಕೆಯಿಂದಲೇ ಓಡಾಡುತ್ತಿದ್ದರು. ಇದೀಗ ತನ್ನ ದೇಹ ತೂಕವನ್ನು ಬರೋಬ್ಬರಿ 133 ಕೆಜಿ ಇಳಿಸಿಕೊಂಡಿದ್ದಾರೆ. ಸದ್ಯದ ಅವರ ದೇಹ ತೂಕ ಇರೋದು 120 ಕೆ.ಜಿ.

ಅಂದ ಮೇಲೆ ನಂದ ಕಿಶೋರ್ ಅವರು ಈಗ ಫಿಟ್ ಆಂಡ್ ಫೈನ್ ಆಗಿದ್ದಾರೆ. ದೇಹದಲ್ಲಿ ಹುಡುಕಿದ್ರೂ ಬೊಜ್ಜು ಸಿಗಲ್ಲ. ಅಷ್ಟರ ಮಟ್ಟಿಗೆ ತನ್ನ ದೇಹ ಸೌಂದರ್ಯವನ್ನು ಕಾಪಾಡಿಕೊಂಡಿದ್ದಾರೆ. ಅಂದ ಹಾಗೇ 133 ಕೆಜಿ ದೇಹ ತೂಕವನ್ನು ಕರಗಿಸುವುದು ಅಂದ್ರೆ ತಮಾಷೆಯ ಸಂಗತಿಯಲ್ಲ. ಇದಕ್ಕಾಗಿ ನಂದ ಕಿಶೋರ್ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ರಘು ಅವರ ಗರಡಿಯಲ್ಲಿ ಪ್ರತಿ ದಿನ ಗಂಟೆಗಟ್ಟಲೇ ಕಠಿಣ ಅಭ್ಯಾಸವನ್ನು ಜಿಮ್ ನಡೆಸಿದ್ದರು. ಬದ್ಧತೆಯಿಂದಲೇ ವರ್ಕ್ ಔಟ್ ಮಾಡಿದ್ರು. ದೇಹವನ್ನು ದಂಡಿಸಿಕೊಂಡ್ರು. ಪ್ರತಿ ದಿನ ಜಿಮ್ ದಿನಚರಿಯನ್ನು ಮಾತ್ರ ತಪ್ಪಿಸಿಕೊಳ್ಳಲಿಲ್ಲ.
ಇನ್ನು ಅದಕ್ಕೆ ತಕ್ಕಂತೆ ಆಹಾರ ಪದ್ಧತಿಯನ್ನು ಅನುಸರಿಸಿಕೊಂಡು ಬಂದ್ರು. ಫಿಟ್ ನೆಸ್ ಗುರುವಿನ ಸಲಹೆಯಂತೆ ತನ್ನ ಆಹಾರ ಕ್ರಮಗಳನ್ನು ಅನುಸರಿಸಿಕೊಂಡು ಡಯಟ್ ಕೂಡ ಮಾಡಿದ್ರು.

 

ಇದೀಗ ತಾನು 253 ಕೆಜಿಯಿಂದ 133 ಕೆಜಿ ದೇಹ ತೂಕವನ್ನು ಹೇಗೆ ಕರಗಿಸಿದೆ ಎಂಬುದನ್ನು ವಿಡಿಯೋಂದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ನಡುವೆ ನಂದ ಕಿಶೋರ್ ಅವರು ದೇಹ ತೂಕ ಇಳಿಸಿಕೊಳ್ಳುವುದರ ಹಿಂದೆ ನಾಯಕ ನಟನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರಾ ಅನ್ನೋ ಅನುಮಾನ ಕೂಡ ಬರುತ್ತಿದೆ. ಈಗಾಗಲೇ ತಮ್ಮ ನಿರ್ದೇಶನದ ಚಿತ್ರಗಳ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿರುವ ನಂದ ಕಿಶೋರ್ ನಿರ್ದೇಶಕನ ಜವಾಬ್ದಾರಿಯ ಜೊತೆಗೆ ನಾಯಕ ನಟನಾಗಿ ಕಾಣಿಸಿಕೊಂಡ್ರೂ ಅಚ್ಚರಿ ಪಡಬೇಕಾಗಿಲ್ಲ. ಒಟ್ಟಿನಲ್ಲಿ ಬದ್ಧತೆ ಮತ್ತು ಪರಿಶ್ರಮ ಹಾಗೂ ಗುರಿ ಇದ್ರೆ ಏನು ಬೇಕಾದ್ರೂ ಸಾಧಿಸಬಹುದು ಎಂಬುದಕ್ಕೆ ನಂದ ಕಿಶೋರ್ ನಿದರ್ಶನವಾಗಿದ್ದಾರೆ.

ಫಸ್ಟ್ನೈಟ್ ನಲ್ಲಿ ಏನ್ಮಾಡ್ತಾರೆ? ಎಂದ ರಚಿತಾ ಟ್ರೋಲ್ ಗೆ ಗುರಿ : ರಚಿತಾರನ್ನ ಬ್ಯಾನ್ ಮಾಡುವಂತೆ ಆಗ್ರಹಿಸಿದ ಕ್ರಾಂತಿದಳ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd