ಸಿಎಂ ಬೊಮ್ಮಾಯಿ ಭೇಟಿ ಮಾಡಿದ ಕೇರಳ ಸಿಎಂ – ಹಲವು ವಿಷಯಗಳ ಕುರಿತು ಚರ್ಚೆ..
ಚಿಕ್ಕಬಳ್ಳಾಪುರದಲ್ಲಿ ನಡೆಯತ್ತಿರುವ CPIM ಸಮಾವೇಶದಲ್ಲಿ ಭಾಗವಹಿಸಲು ಕರ್ನಾಟಕ್ಕೆ ಆಗಮಿಸಿರುವ ಕೇರಳ ಸಿ ಎಂ ಪಿಣರಾಯಿ ವಿಜಯನ್ ಅವರು ಬೆಂಗಳೂರಿನ ಸಿ ಎಂ ಗೃಹ ಕಛೇರಿ ಕೃಷ್ಣಾದಲ್ಲಿ ಸಿ ಎಂ ಬಸವರಾಜ್ ಬೊಮ್ಮಾಯಿ ಅವರನ್ನ ಬೇಟಿಯಾಗಿದ್ದಾರೆ.
ಕೇರಳ-ಕರ್ನಾಟಕ ರೈಲ್ವೇ ಯೋಜನೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ತಲಶ್ಶೇರಿ-ಮೈಸೂರು, ನಿಲಂಬೂರು–ನಂಜನಗೂಡು ರೈಲ್ವೆ ಯೋಜನೆ ಅನುಷ್ಠಾನದ ಕುರಿತು ಉಭಯ ನಾಯಕರಿಂದ ಚರ್ಚೆ ಮಾಡಲಾಗಿದೆ. ಹೈ–ಸ್ಪೀಡ್, ಸಿಲ್ವರ್ ಮಾರ್ಗ ಮಂಗಳೂರು ವರೆಗೆ ವಿಸ್ತರಣೆ, 2 ರೈಲು ಯೋಜನೆಗಳ ಕುರಿತು ಮುಖ್ಯಮಂತ್ರಿಗಳು ಚರ್ಚೆ ನಡೆಸಿದ್ದಾರೆ.
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಫಲಫ್ರದ ಮಾತುಕತೆ ನಡೆಸಲಾಯಿತು. ಅಂತರರಾಜ್ಯ ಮತ್ತು ಪರಸ್ಪರ ಹಿತಾಸಕ್ತಿಯ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿ ತಿಳಿಸಿದ್ದಾರೆ.