ಬಹುನಿರೀಕ್ಷಿತ ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಡಿಸೆಂಬರ್ 2ರಂದು ಅಹಮದಾಬಾದ್ನ ಅರೆನಾ ಬೈ ಟ್ರಾನ್ಸ್ಸ್ಟೇಡಿಯ ಕ್ರೀಡಾಂಗಣದಲ್ಲಿ ಮೊದಲು ಪಂದ್ಯ ನಡೆಯಲಿದೆ. ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ತೆಲುಗು ಟೈಟನ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪ್ರೊ ಕಬಡ್ಡಿ ಲೀಗ್ನ 10ನೇ ಆವೃತ್ತಿಯ ಪಂದ್ಯಾವಳಿ 12 ನಗರಗಳಲ್ಲಿ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು 2023 ಡಿಸೆಂಬರ್ 2ರಿಂದ 2024ರ ಫೆಬ್ರವರಿ 21ರವರೆಗೆ ನಡೆಯಲಿದೆ. ಇದಾದ ನಂತರದಲ್ಲಿ ಲೀಗ್ನ ಪ್ಲೇ-ಆಫ್ಗಳ ಪಂದ್ಯಗಳ ವೇಳಾಪಟ್ಟಿ ಪ್ರಕಟಗೊಳ್ಳಲಿದೆ. ಪ್ರಸಕ್ತ ಸೀಸನ್ ಆರಂಭಿಕ ಪಂದ್ಯಗಳು ಅಹಮದಾಬಾದ್ನಿಂದ(ಡಿಸೆಂಬರ್ 2ರಿಂದ 7ರವರೆಗೆ) ನಡೆಯಲಿದ್ದು, ನಂತರ ಬೆಂಗಳೂರು (8-13 ಡಿಸೆಂಬರ್ 2023), ಪುಣೆ (15-20 ಡಿಸೆಂಬರ್ 2023), ಚೆನ್ನೈ (22-27 ಡಿಸೆಂಬರ್ 2023), ನೋಯ್ಡಾ (29 ಡಿಸೆಂಬರ್ 2023 – 3 ಜನವರಿ 2024), ಮುಂಬೈ (5-10 ಜನವರಿ 2024), ಜೈಪುರ (12-17 ಜನವರಿ 2024), ಹೈದರಾಬಾದ್ (19-24 ಜನವರಿ 2024), ಪಟನಾ (26-31 ಜನವರಿ 2024), ಡೆಲ್ಲಿ(2-7 ಫೆಬ್ರವರಿ 2024), ಕೋಲ್ಕೊತಾ (9-14 ಫೆಬ್ರವರಿ 2024) ಮತ್ತು ಪಂಚಕುಲ (16-21 ಫೆಬ್ರವರಿ 2024) ಮೈದಾನಗಳಲ್ಲಿ ನಡೆಯಲಿದೆ.
ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಮತ್ತು ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಪ್ರಸಾರವಾಗಲಿದೆ. ಲೀಗ್ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಅಪ್ಡೇಟ್ಗಳಿಗೆ www.prokabaddi.com ಲಾಗಿನ್ ಆಗಿ ಮಾಹಿತಿ ಪಡೆಯಬಹುದು. ಅಲ್ಲದೇ ಅಧಿಕೃತ ಪ್ರೊ ಕಬಡ್ಡಿ ಅಪ್ಲಿಕೇಶನ್ ಅಥವಾ ಇನ್ಸ್ಟಾಗ್ರಾಮ…, ಯೂಟ್ಯೂಬ್,ಫೇಸ್ಬುಕ್, ಟ್ವಿಟರ್ ಮತ್ತು ಥ್ರೆಡ್ಗಳಲ್ಲಿ @prokabaddi ಫಾಲೋ ಮಾಡಿ ಪಡೆಯಬಹುದು.
PKL 2023, Kabaddi League, Bengaluru Bulls, Saaksha TV