ಸ್ಯಾಕ್ರಮೆಂಟೊ: ವಿಮಾನವೊಂದು ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿ, 18 ಜನರು ಗಾಯಗೊಂಡಿದ್ದಾರೆ.
ಈ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (Southern California) ನಡೆದಿದೆ. ಗುರುವಾರ ಮಧ್ಯಾಹ್ನ ಲಾಸ್ ಏಂಜಲೀಸ್‌ನ (Los Angeles) ಆಗ್ನೇಯಕ್ಕೆ ಸುಮಾರು 25 ಮೈಲಿ ದೂರದ ಫುಲ್ಲರ್‌ಟನ್ ಮುನ್ಸಿಪಲ್ ಏರ್‌ಪೋರ್ಟ್ ಹತ್ತಿರ ಈ ಘಟನೆ ನಡೆದಿದೆ.
ಆರ್‌ವಿ-10 ಎಂದು ಗುರುತಿಸಲಾದ ವಿಮಾನವು ಫರ್ನಿಚರ್ ತಯಾರಿಕಾ ಕಂಪನಿಯ ಮೇಲ್ಛಾವಣಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಟ್ಟಡ ಗೋಡೆಯಲ್ಲಿ ರಂಧ್ರ ನಿರ್ಮಾಣವಾಗಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 18 ಜನ ಗಾಯಗೊಂಡಿದ್ದಾರೆ.
ಆದರೆ, ಸಾವನ್ನಪ್ಪಿದವರು ವಿಮಾನದಲ್ಲಿದ್ದರಾ ಅಥವಾ ಸ್ಥಳೀಯರಾ ಎಂಬುವುದು ಗೊತ್ತಾಗಿಲ್ಲ. ಸ್ಥಳೀಯರನ್ನು ಕೂಡಲೇ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಅಪಘಾತದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವಿಮಾನ ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿದ್ದಂತೆ ದಟ್ಟವಾದ ಹೊಗೆ ಆವರಿಸಿದೆ.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ CJP ಪ್ರತಿಭಟನೆ: SIR ರದ್ದುಪಡಿಸುವಂತೆ ಒತ್ತಾಯ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್...








