ಆಟಕ್ಕಿಂತ ಆಟಗಾರರು ದೊಡ್ಡವರಲ್ಲ.. game saaksha tv
ಟೀಂ ಇಂಡಿಯಾ ಕ್ಯಾಪ್ಟನ್ಸ್ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಸಂಥಿಂಗ್ ಏನೋ ನಡೆಯುತ್ತಿದೆ ಅನ್ನೋ ಗುಸುಸುಗು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಈ ಮಧ್ಯೆ ಕೇಂದ್ರ ಮಂತ್ರಿ ಅನುರಾಗ್ ಠಾಕೂರ್ ಈ ಇಬ್ಬರನ್ನು ಉದೇಶಿಸಿ ಆಸಕ್ತಿಕರ ಹೇಳಿಕೆಗಳನ್ನು ನೀಡಿದ್ದಾರೆ.
ಆಟಕ್ಕಿಂತ ಆಟಗಾರರು ದೊಡ್ಡವರಲ್ಲ ಎಂದು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರನ್ನು ಗುರಿಯಾಗಿಸಿಕೊಂಡು ಟಾಂಗ್ ನೀಡಿದ್ದಾರೆ.
ವಿರಾಟ್ ಕೊಹ್ಲಿ ಆಗಲಿ.. ರೋಹಿತ್ ಶರ್ಮಾ ಆಗಲಿ.. ಬಿಸಿಸಿಐ ನಿರ್ಣಯವನ್ನು ಗೌರವಿಸಬೇಕು. ಆ ನಿರ್ಣಯಕ್ಕೆ ಕಟ್ಟುಬಿದ್ದು ಇರಬೇಕೆಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಭಾರತದ ಕ್ರಿಕೆಟ್ ನಲ್ಲಿ ಉದ್ಭವವಾಗಿರುವ ಈ ಗೊಂದಲದ ಬಗ್ಗೆ ಬಿಸಿಸಿಐ ಗಂಭೀರವಾಗಿ ಚಿಂತಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇನ್ನು ಟಿ 20 ನಾಯಕತ್ವದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಬಿಸಿಸಿಐ ರೋಹಿತ್ ಶರ್ಮಾ ಅವರನ್ನು ಚುಟುಕು ಕ್ರಿಕೆಟ್ ನ ಸಾರಥಿಯನ್ನಾಗಿ ನೇಮಿಸಿತು.
ಕಿವೀಸ್ ವಿರುದ್ಧ ನಡೆದ ಟಿ 20 ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಟೀಂ ಇಂಡಿಯಾ ದಿಗ್ವಿಜಯ ಸಾಧಿಸಿತ್ತು.
ಇದಾದ ಬಳಿಕ ವಿರಾಟ್ ಗೆ ಶಾಕ್ ನೀಡಿದ್ದ ಬಿಸಿಸಿಐ, ಏಕದಿನ ನಾಯಕತ್ವದಿಂದ ಅವರನ್ನ ವಜಾ ಮಾಡಿತ್ತು. ಸೀಮಿತ ಒವರ್ ಗಳ ಕ್ರಿಕೆಟ್ ಗೆ ಒಬ್ಬರೇ ನಾಯಕರು ಇರಬೇಕು ಎಂದು ರೋಹಿತ್ ಶರ್ಮಾ ಅವರನ್ನ ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕರನ್ನಾಗಿ ನೇಮಿಸಿತ್ತು.
ಆದ್ರೆ ಉತ್ತಮ ದಾಖಲೆ ಹೊಂದಿದ್ದರೂ ನಾಯಕತ್ವದಿಂದ ಕೆಳಗಿಳಿಸಿದ್ದರಿಂದ ವಿರಾಟ್ ಸಹಜವಾಗಿಯೇ ಬೇಸರಗೊಂಡಿದ್ದರು. ಅಲ್ಲದೇ ನೂತನ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಧ್ಯೆ ಸಂಬಂಧ ಸರಿಯಿಲ್ಲ ಎಂಬ ಸುದ್ದಿಯೂ ಹರಿದಾಡಿತ್ತು.
ಆದ್ರೆ ಈ ವದಂತಿಗಳಿಗೆ ವಿರಾಟ್ ಕೊಹ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ. ರೋಹಿತ್ ಮತ್ತು ನನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಸಂಪೂರ್ಣ ಬೆಂಬಲ ರೋಹಿತ್ ಗಿದೆ.
ಅವರ ನಾಯಕತ್ವದಲ್ಲಿ ಆಡಲು ನಾನು ಸಿದ್ಧನಾಗಿದ್ದು, ಪಂದ್ಯಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.
ಅಲ್ಲದೇ ದಕ್ಷಿಣಾ ಆಫ್ರಿಕಾ ಏಕದಿನ ಸರಣಿಯಿಂದ ನಾನು ದೂರ ಸರಿಯುವುದಿಲ್ಲ. ಆ ಸರಣಿಗಾಗಿ ನಾನು ಎದುರು ನೋಡುತ್ತಿದ್ದೇನೆ ಎಂದು ವಿರಾಟ್ ಸ್ಪಷನೆ ನೀಡಿದ್ದಾರೆ.
ಅಲ್ಲದೇ ಏಕದಿನ ನಾಯಕತ್ವದಿಂದ ನನ್ನನ್ನು ಕೆಳಗಿಳಿಸಿದ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ.
ನನ್ನ ಜೊತೆ ಯಾರೂ ಮಾತನಾಡಿಲ್ಲ ಎಂದು ವಿರಾಟ್ ಹೇಳಿದ್ದಾರೆ. ಈ ಬೆಳವಣಿಗಳ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿ, ಆಟಗಾರರಿಗೆ ವಾರ್ನಿಂಗ್ ನೀಡಿದ್ದಾರೆ. ಇದು ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.