3ನೇ ಆವೃತ್ತಿಯ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿ ಸೆ. 20 ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಲೀಗ್ ನ ಹರಾಜನ್ನು ಆಗಸ್ಟ್ 29 ರಂದು ನಡೆಸಲಾಯಿತು.
ಒಟ್ಟು 6 ತಂಡಗಳು ಆಟಗಾರರನ್ನು ಖರೀದಿಸಿವೆ. ವಿದೇಶಿ ಆಟಗಾರರು ಹಾಗೂ ಭಾರತೀಯ ಆಟಗಾರರನ್ನು ಹರಾಜಿನಲ್ಲಿ ಖರೀದಿ ಮಾಡಲಾಯಿತು. ದಿನೇಶ್ ಕಾರ್ತಿಕ್, ಶಿಖರ್ ಧವನ್ ಮತ್ತು ಹಾಶಿಮ್ ಆಮ್ಲಾ ಸೇರಿದಂತೆ ಹಲವು ಆಟಗಾರರು ಕೂಡ ಇದೇ ಮೊದಲ ಬಾರಿಗೆ ಲೆಜೆಂಡ್ ಲೀಗ್ ನಲ್ಲಿ ಆಡಲಿದ್ದಾರೆ.
ಶ್ರೀಲಂಕಾದ ಮಾಜಿ ಆಲ್ ರೌಂಡರ್ ಈಸುರು ಉದಾನ ದುಬಾರಿ ಬೆಲೆಗೆ ಮಾರಾಟವಾಗಿದ್ದಾರೆ. 62 ಲಕ್ಷ ರೂ.ಗೆ ಹೈದರಾಬಾದ್ ತಂಡ ಖರೀದಿಸಿತು. ಚಾಡ್ವಿಕ್ ವಾಲ್ಟನ್ ಹರಾಜಿನಲ್ಲಿ ಮಾರಾಟವಾದ ಎರಡನೇ ಅತ್ಯಂತ ದುಬಾರಿ ಆಟಗಾರನಾಗಿದ್ದಾರೆ. ಅವರನ್ನು ಹೈದರಾಬಾದ್ 60 ಲಕ್ಷ ರೂ.ಗೆ ಖರೀದಿಸಿತು. ಆಸ್ಟ್ರೇಲಿಯಾದ ಮಾಜಿ ಆಲ್ರೌಂಡರ್ ಡಾನ್ ಕ್ರಿಸ್ಟಿಯನ್ ಅವರನ್ನು ಮಣಿಪಾಲ್ ತಂಡ 56.95 ಲಕ್ಷಕ್ಕೆ ಖರೀದಿಸಲಾಯಿತು. ಕಿವೀಸ್ ತಂಡದ ಮಾಜಿ ಬ್ಯಾಟ್ಸ್ಮನ್ ರಾಸ್ ಟೇಲರ್ ರನ್ನು ಕೊನಾರ್ಕ್ ಸೂರ್ಯಸ್ 50.34 ಲಕ್ಷಕ್ಕೆ ಖರೀದಿಸಲಾಯಿತು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದ ಶಿಖರ್ ಧವನ್ ರನ್ನು ಗುಜರಾತ್ ಹಾಗೂ ದಿನೇಶ್ ಕಾರ್ತಿಕ್ ರನ್ನು ದಕ್ಷಿಣದ ಸದರ್ನ್ ಸೂಪರ್ ಸ್ಟಾರ್ಸ್ ತಂಡ ನೇರವಾಗಿ ತಮ್ಮ ತಂಡಕ್ಕೆ ಸೇರಿಸಿಕೊಂಡವು.
ಇನ್ನುಳಿದಂತೆ ಆಟಗಾರರನ್ನು ತಂಡಗಳು ಖರೀದಿಸಿದವು…
ಅರ್ಬನ್ ರೈಸರ್ಸ್ ಹೈದರಾಬಾದ್
• ಸಮೀವುಲ್ಲಾ ಶಿನ್ವಾರಿ – 18.59 ಲಕ್ಷ
• ಜಾರ್ಜ್ ವರ್ಕರ್ – 15.5 ಲಕ್ಷ
• ಈಸುರು ಉದಾನ- 62 ಲಕ್ಷ
• ರಿಕಿ ಕ್ಲಾರ್ಕ್ – 38 ಲಕ್ಷ
• ಸ್ಟುವರ್ಟ್ ಬಿನ್ನಿ – 40 ಲಕ್ಷ
• ಜಸ್ಕರನ್ ಮಲ್ಹೋತ್ರಾ – 10.50 ಲಕ್ಷ
• ಚಾಡ್ವಿಕ್ ವಾಲ್ಟನ್ – 60 ಲಕ್ಷ
• ಬಿಪುಲ್ ಶರ್ಮಾ – 17 ಲಕ್ಷ
ಸದರ್ನ್ ಸೂಪರ್ ಸ್ಟಾರ್ಸ್
• ಎಲ್ಟನ್ ಚಿಗುಂಬರ – 25 ಲಕ್ಷ
• ಹ್ಯಾಮಿಲ್ಟನ್ ಮಸಕಡ್ಜಾ – 23.28 ಲಕ್ಷ
• ಪವನ್ ನೇಗಿ – 40 ಲಕ್ಷ
• ಜೀವನ್ ಮೆಂಡಿಸ್ – 15.6 ಲಕ್ಷ
• ಸುರಂಗ ಲಕ್ಮಲ್ – 34 ಲಕ್ಷ
• ಶ್ರೀವತ್ಸ ಗೋಸ್ವಾಮಿ – 17 ಲಕ್ಷ
• ಹಮೀದ್ ಹಸನ್ – 21 ಲಕ್ಷ
• ನಾಥನ್ ಕೌಲ್ಟರ್ ನೈಲ್ – 42 ಲಕ್ಷ
ಇಂಡಿಯಾ ಕ್ಯಾಪಿಟಲ್ಸ್
• ಡ್ವೇನ್ ಸ್ಮಿತ್ – 47.36 ಲಕ್ಷ
• ಕಾಲಿನ್ ಡಿ ಗ್ರಾಂಡ್ಹೋಮ್ – 32.36 ಲಕ್ಷ
• ನಮನ್ ಓಜಾ – 40 ಲಕ್ಷ
• ಧವಳ್ ಕುಲಕರ್ಣಿ – 50 ಲಕ್ಷ
• ಕ್ರಿಸ್ ಎಂಪೋಫು – 40 ಲಕ್ಷ
ಕೋನಾರ್ಕ್ ಸೂರ್ಯಸ್ ಒಡಿಶಾ
• ಕೆವಿನ್ ಒ’ಬ್ರೇನ್ – 29.17 ಲಕ್ಷ
• ರಾಸ್ ಟೇಲರ್ – 50.34 ಲಕ್ಷ
• ವಿನಯ್ ಕುಮಾರ್ – 33 ಲಕ್ಷ
• ರಿಚರ್ಡ್ ಲೆವಿ – 17 ಲಕ್ಷ
• ದಿಲ್ಶನ್ ಮುನವೀರ – 15.5 ಲಕ್ಷ
• ಶಹಬಾಜ್ ನದೀಮ್ – 35 ಲಕ್ಷ
• ಫಿಡೆಲ್ ಎಡ್ವರ್ಡ್ಸ್ – 29 ಲಕ್ಷ
• ಬೆನ್ ಲಾಫ್ಲಿನ್ – 23 ಲಕ್ಷ
ಗುಜರಾತ್ ಜೈಂಟ್ಸ್
• ಲಿಯಾಮ್ ಪ್ಲಂಕೆಟ್ – 41.56 ಲಕ್ಷ
• ಮೋರ್ನೆ ವ್ಯಾನ್ ವೈಕ್ – 29.29 ಲಕ್ಷ
• ಲೆಂಡ್ಲ್ ಸಿಮನ್ಸ್ – 37.5 ಲಕ್ಷ
• ಅಸ್ಗರ್ ಅಫ್ಘಾನ್ – 33.17 ಲಕ್ಷ
• ಜೆರೋಮ್ ಟೇಲರ್ – 36.17 ಲಕ್ಷ
• ಪಾರಸ್ ಖಡ್ಕಾ – 12.58 ಲಕ್ಷ
• ಸೆಕ್ಕುಗೆ ಪ್ರಸನ್ನ – 22.78 ಲಕ್ಷ
• ಕಮೌ ಲಿವೆರಾಕ್ – 11 ಲಕ್ಷಗಳು
• ಸೈಬ್ರಾಂಡ್ – 15 ಲಕ್ಷ
ಮಣಿಪಾಲ್ ಟೈಗರ್ಸ್
• ಶೆಲ್ಡನ್ ಕಾಟ್ರೆಲ್ – 33.56 ಲಕ್ಷ
• ಡಾನ್ ಕ್ರಿಶ್ಚಿಯನ್ – 56.95 ಲಕ್ಷ
• ಏಂಜೆಲೊ ಪೆರೇರಾ – 41 ಲಕ್ಷ
• ಮನೋಜ್ ತಿವಾರಿ – 15 ಲಕ್ಷ
• ಅಸೆಲಾ ಗುಣರತ್ನ – 36 ಲಕ್ಷ
• ಸೊಲೊಮನ್ ಮೇಯರ್ – 38 ಲಕ್ಷ
• ಅನುರೀತ್ ಸಿಂಗ್ – 27 ಲಕ್ಷ
• ಅಬು ನೆಚಿಮ್ – 19 ಲಕ್ಷ
• ಅಮಿತ್ ವರ್ಮಾ – 26 ಲಕ್ಷ