ಮೋದಿ ಯುಗಪುರುಷ, ಸ್ಟೇಡಿಯಂಗೆ ಅವರ ಹೆಸರಿಟ್ಟರೆ ತಪ್ಪೇನು : ರಾಮ್ ದೇವ್
ಹರಿದ್ವಾರ : ಗುಜರಾತ್ ನ ಅಹಮದಾಬಾದ್ ನಲ್ಲಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ನರೇಂದ್ರ ಮೋದಿ ಎಂದು ಮರುನಾಮಕರಣ ಮಾಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಸ್ಟೇಡಿಯಂಗೆ ಈ ಹಿಂದೆ ಇದ್ದ ಸರ್ದಾರ್ ಪಟೇಲ್ ಅವರ ಹೆಸರನ್ನು ತೆಗೆದು ಹಾಕಿ ನರೇಂದ್ರ ಮೋದಿ ಸ್ಟೇಡಿಯಂ ಅಂತಾ ಬುಧುವಾರ ಮರು ನಾಮಕರಣ ಮಾಡುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಶುರುವಾದವು.
ಇದು ಸರ್ದಾರ್ ಪಟೇಲ್ ಅವರಿಗೆ ಮಾಡಿದ ಅಪಮಾನ ಅಂತಾ ಕಾಂಗ್ರೆಸ್ ಸೋಶಿಯಲ್ ಮಿಡಿಯಾದಲ್ಲಿ ಟೀಕೆ ಮಾಡ್ತು.
ಹಾಗೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೂಡ ಇಡೀ ದೇಶಕ್ಕೆ ಮೋದಿ ಎಂದು ಹೆಸರಿಡಲಿ ಎಂದು ಟೀಕೆ ಮಾಡಿದ್ದರು. ಇದೀಗ ಈ ಬಗ್ಗೆ ಯೋಗಗುರು ರಾಮ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ “ಯುಗಪುರಷ”. ಸ್ಟೇಡಿಯಂಗೆ ಅವರ ಹೆಸರಿಟ್ಟಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದಿರುವ ರಾಮ್ ದೇವ್, ಹಳೆಯ ಕಟ್ಟಡಗಳಿಗೆ, ಸ್ಮಾರಕಗಳಿಗೆ ಆ ಕಾಲದ ಪ್ರಮುಖರ, ಸಾಧಕರ ಹೆಸರಿಡುವುದಾದರೆ,
ಈಗ ಯುಗ ಪುರುಷನಂತಿರುವ ನರೇಂದ್ರ ಮೋದಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಏಕಿಡಬಾರದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಖಂಡಿಸಿರುವ ರಾಮದೇವ್, ಇದು ರಾಜಕೀಯ ಪ್ರೇರಿತ ಹೇಳಿಕೆ ಎಂದಿದ್ದಾರೆ.
