ಮನ್ ಕಿ ಬಾತ್ ನಲ್ಲಿ ಮಾತನಾಡಲು ವಿಷಯಗಳನ್ನು ನೀಡುವಂತೆ ದೇಶವಾಸಿಗಳಿಗೆ ಪ್ರಧಾನಿ ಮೋದಿ ಮನವಿ
ಹೊಸದಿಲ್ಲಿ, ಜೂನ್ 14: ಜೂನ್ ತಿಂಗಳ ಕೊನೆಯ ಭಾನುವಾರ ಪ್ರಸಾರವಾಗಲಿರುವ ಮನ್ ಕಿ ಬಾತ್ ನಲ್ಲಿ ಮಾತನಾಡಲು ನಿಮ್ಮ ಸಲಹೆ ವಿಷಯಗಳನ್ನು ನೀಡುವಂತೆ ಪ್ರಧಾನಿ ಮೋದಿ ದೇಶದ ಜನರನ್ನು ಕೇಳಿಕೊಂಡಿದ್ದಾರೆ.
ಜೂನ್ ತಿಂಗಳಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ 28ಕ್ಕೆ ಪ್ರಸಾರವಾಗಲಿದ್ದು, ಇನ್ನು ಎರಡು ವಾರ ಬಾಕಿ ಇದೆ. ನಿಮ್ಮ ಚಿಂತನೆ, ಸಲಹೆ, ವಿಷಯಗಳನ್ನು ನನ್ನ ಜೊತೆ ಹಂಚಿಕೊಳ್ಳಿ. ಇದರಿಂದ ನನಗೆ ಮತ್ತಷ್ಟು ವಿಷಯಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗುತ್ತದೆ. ಕೊರೋನಾ ವೈರಸ್ ಜೊತೆಗೆ ಇನ್ನೂ ಅದೆಷ್ಟೋ ವಿಷಯಗಳು ನಿಮ್ಮ ಬಳಿ ಇರಬಹುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಜನರು ಸಲಹೆ ವಿಷಯಗಳನ್ನು ಯಾವ ರೀತಿ ಕಳುಹಿಸಿ ಕೊಡಬಹುದೆಂದು ತಿಳಿಸಿದ್ದು, ಒಂದು ಸಂಖ್ಯೆಯನ್ನು ನೀಡಿ ನಾಗರಿಕರು ರೆಕಾರ್ಡ್ ಮಾಡಿರುವ ಸಂದೇಶಗಳನ್ನು ಇಲ್ಲಿಗೆ ಕಳುಹಿಸಬಹುದು. ನಮೊ ಆಪ್ ಅಥವಾ ಮೈ ಗವರ್ನಮೆಂಟ್ ಮೂಲಕ ಕೂಡ ಕಳುಹಿಸಬಹುದು ಎಂದು ಹೇಳಿದ್ದಾರೆ.
ಕಳೆದ ತಿಂಗಳು ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೊರೋನಾ ವೈರಸ್ ವಿರುದ್ಧ ಹೋರಾಟ, ಕೊರೋನಾ ವಾರಿಯರ್ಸ್ ಶ್ರಮ, ಕೊರೋನಾ ಸೋಂಕಿನಿಂದ ಗುಣಮುಖರಾದವರ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು.