ನೇಪಾಳದ ಲುಂಬಿನಿ ತಲುಪಿದ ಮೋದಿ, ಬರಮಾಮಡಿಕೊಂಡ ಶೇರ್ ಬಹದ್ದೂರ್ ದೇವುಬಾ
ವೈಶಾಖ ಬುದ್ಧ ಪೂರ್ಣಿಮೆಯ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ ನೇಪಾಳದ ಲುಂಬಿನಿಗೆ ತಲುಪಿದ್ದಾರೆ. ಲುಂಬಿನಿಗೆ ಆಗಮಿಸಿದ ಮೋದಿ ಅವರನ್ನು ನೇಪಾಳ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರು ಬರಮಾಡಿಕೊಂಡರು. ಪವಿತ್ರ ಮಾಯಾದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ಮೋದಿ ಪ್ರಾರ್ಥನೆ ಸಲ್ಲಿಸಿದರು.
ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ವಿಶಿಷ್ಟ ಕೇಂದ್ರದ ನಿರ್ಮಾಣಕ್ಕಾಗಿ ಶ್ರೀ ಮೋದಿ ಅವರು ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿದರು. ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಆರ್ಥಿಕ ಬೆಂಬಲದೊಂದಿಗೆ ಲುಂಬಿನಿ ಡೆವಲಪ್ಮೆಂಟ್ ಟ್ರಸ್ಟ್ನ ಆಶ್ರಯದಲ್ಲಿ ಅಂತರರಾಷ್ಟ್ರೀಯ ಬೌದ್ಧ ಒಕ್ಕೂಟ, ಭಾರತದ ಬೌದ್ಧ ಸಂಸ್ಕೃತಿ ಮತ್ತು ಪರಂಪರೆಯ ವಿಶಿಷ್ಟವಾದ ಭಾರತ ಅಂತರರಾಷ್ಟ್ರೀಯ ಕೇಂದ್ರದ ನಿರ್ಮಾಣವನ್ನು ಸಾರ್ವತ್ರಿಕ ಮನವಿಯೊಂದಿಗೆ ಕೈಗೊಳ್ಳಲಾಗುವುದು.
ಇದು 2014 ರಲ್ಲಿ ಪ್ರಧಾನಿ ಅಧಿಕಾರ ಸ್ವೀಕರಿಸಿದಾಗಿನಿಂದ ನೇಪಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಐದನೇ ಭೇಟಿ ಮತ್ತು ಲುಂಬಿನಿಗೆ ಅವರ ಮೊದಲ ಭೇಟಿಯಾಗಿದೆ. ಮೋದಿಯವರ ಭೇಟಿಯು ಭಾರತದ ನೆರೆಹೊರೆಯವವರು ಮೊದಲು ಎಂಬ ನೀತಿಯ ಮುಂದುವರಿದ ಭಾಗವಾಗಿದೆ. ಭಾರತ ಮತ್ತು ನೇಪಾಳದ ನಡುವೆ ನಿಯಮಿತ ಉನ್ನತ ಮಟ್ಟದ ವಿನಿಮಯದ ಸಂಪ್ರದಾಯವನ್ನು ಮುಂದುವರೆಸಿದೆ. ಭೇಟಿಯ ವೇಳೆ ಪ್ರಧಾನಿಯವರು ನೇಪಾಳದ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಸಭೆಯನ್ನೂ ನಡೆಸಲಿದ್ದಾರೆ.