ಭಾರತೀಯರನ್ನ ಕರೆತರಲು ಸಿಗುವ ಯಾವ ಅವಕಾಶವನ್ನೂ ಬಿಡುವುದಿಲ್ಲ – ಪ್ರಧಾನಿ..
ಉತ್ತರ ಪ್ರದೇಶದಲ್ಲಿ ಕೊನೆಯ ಹಂತದ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ಪೂರ್ಣ ಶಕ್ತಿಯನ್ನ ಪ್ರಯೋಗಿಸಿ ಪ್ರಚಾರ ಆರಂಭಿಸಿವೆ. ಇಂದು ಪ್ರಧಾನಿ ನರೇಂದ್ರ ಮೋದಿ ಸೋನಭದ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಚುರ್ಕ್ನ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯ ಸಭಾಂಗಣದಲ್ಲಿ ನೆರೆದಿದ್ದ ಅಪಾರ ಜನಸ್ತೋಮ ನಡುವೆ ಜಿಲ್ಲೆಯ ಎಲ್ಲಾ ನಾಲ್ಕು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ರಾಜ್ಯಕ್ಕೆ ವಿದ್ಯುತ್ ನೀಡಿದ ಭೂಮಿಗೆ ನಮಸ್ಕಾರ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ ಸರ್ಕಾರವು ತನ್ನ ನಾಗರಿಕರ ಸುರಕ್ಷಿತ ವಾಪಸಾತಿಗಾಗಿ ಸಿಗುವ ಯಾವುದೇ ಅವಕಾಶವನ್ನ ಬಿಡುವುದಿಲ್ಲ ಎಂದು ಇಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ. ಇಂದು ಜಗತ್ತಿನ ಪರಿಸ್ಥಿತಿಯನ್ನು ನೀವು ನೋಡುತ್ತಿದ್ದೀರಿ. ಉಕ್ರೇನ್ನಲ್ಲಿ ಸಿಲುಕಿರುವ ನಮ್ಮ ದೇಶದ ನಾಗರಿಕರನ್ನು ರಕ್ಷಿಸಲು ನಾವು ಇಂತಹ ದೊಡ್ಡ ಅಭಿಯಾನವನ್ನು ನಡೆಸುತ್ತಿರುವುದು ಭಾರತ ಬೆಳೆಯುತ್ತಿರುವ ಸಾಮರ್ಥ್ಯವಾಗಿದೆ.ಎಂದು ಮೋದಿ ತಿಳಿಸಿದರು.
ಆಪರೇಷನ್ ಗಂಗಾ ಅಡಿಯಲ್ಲಿ, ಉಕ್ರೇನ್ನಿಂದ ಹಲವಾರು ಸಾವಿರ ನಾಗರಿಕರನ್ನು ದೇಶಕ್ಕೆ ಮರಳಿ ಕರೆತರಲಾಗಿದೆ. ಈ ಕಾರ್ಯಾಚರಣೆಗೆ ಉತ್ತೇಜನ ನೀಡಲು, ಭಾರತವು ತನ್ನ 4 ಮಂತ್ರಿಗಳನ್ನು ಅಲ್ಲಿಗೆ ಕಳುಹಿಸಿದೆ. ಸಂಕಷ್ಟದಲ್ಲಿರುವ ಭಾರತೀಯರನ್ನು ವೇಗವಾಗಿ ರಕ್ಷಿಸಲು ನಮ್ಮ ಸೇನೆ ಮತ್ತು ವಾಯುಪಡೆಯನ್ನೂ ನಿಯೋಜಿಸಲಾಗಿದೆ. ಎಂದು ಮೋದಿ ಭರವಸೆ ನೀಡಿದರು.
ಸ್ವಾವಲಂಬಿ ಭಾರತ ಅಭಿಯಾನವನ್ನು ಗೇಲಿ ಮಾಡುವವರು, ಭಾರತದ ಪಡೆಗಳನ್ನು ಅವಮಾನಿಸುವವರು, ಭಾರತದ ಉದ್ಯಮಿಗಳ ಕಠಿಣ ಪರಿಶ್ರಮದ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಗೇಲಿ ಮಾಡುವವರು ಆ ಪರಿವಾರದವರು ಆ ಕುಟುಂಬಸ್ಥರು ಎಂದಿಗೂ ಭಾರತವನ್ನ ಬಲಿಷ್ಟಗೊಳಿಸಲಾರರು ಎಂದು ರಾಹುಲ್ ಮತ್ತು ಅಖಿಲೇಶ್ ಕುಟುಂಬದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದರು.