ಮಾತಾ ಅಮೃತಾನಂದನಮಹಿ ಆಶಿರ್ವಾದ ಪಡೆದ ಮೋದಿ – ಮುತ್ತಿಕ್ಕಿ ಆಶಿರ್ವಾದ…
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹರಿಯಾಣದ ಫರಿದಾಬಾದ್ನಲ್ಲಿ ಅಮೃತ ಆಸ್ಪತ್ರೆಯನ್ನು ಉದ್ಘಾಟಿಸಿದರು. ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯು 2600 ಹಾಸಿಗೆಗಳನ್ನ ಹೊಂದಿದೆ. ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ‘ಅಮ್ಮ’ ಅವರಿಂದ ಆಶೀರ್ವಾದ ಪಡೆದರು ಮತ್ತು ಅವರನ್ನು ‘ಪ್ರೀತಿ ಮತ್ತು ತ್ಯಾಗದ ಸಾಕಾರ’ ಎಂದು ಕರೆದರು.
ಹರಿಯಾಣದ ಫರಿದಾಬಾದ್ನಲ್ಲಿ ನಡೆದ ಅಮೃತಾ ಆಸ್ಪತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತಾ ಅಮೃತಾನಂದಮಯಿ ‘ಅಮ್ಮ’ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, “ಅಮ್ಮ ಪ್ರೀತಿ ಮತ್ತು ತ್ಯಾಗದ ಮೂರ್ತರೂಪವಾಗಿದೆ. ಅವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ” ಮಾತಾ ಅಮೃತಾನಂದಮಹಿ ಅವರು ಮುತ್ತಿಟ್ಟು ಆಶಿರ್ವದಿಸಿದ ವಿಡಿಯೋ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೃತಾ ಆಸ್ಪತ್ರೆಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಕೇಂದ್ರೀಕೃತ ಸಂಪೂರ್ಣ ಸ್ವಯಂಚಾಲಿತ ಪ್ರಯೋಗಾಲಯವನ್ನು ಒಳಗೊಂಡಿದ್ದು, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ (NCR) ಆರೋಗ್ಯ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡಲಿದೆ.
ಪ್ರಧಾನಿ ಮೋದಿ ಒಂದು ದಿನದ ಹರ್ಯಾಣ ಮತ್ತು ಪಂಜಾಬ್ ಪ್ರವಾಸದಲ್ಲಿದ್ದಾರೆ. ಫರಿದಾಬಾದ್ನಲ್ಲಿ ಉದ್ಘಾಟನೆಯ ನಂತರ, ಪ್ರಧಾನಿ ಮೋದಿಯವರು ಮೊಹಾಲಿಗೆ ಪ್ರಯಾಣಿಸಲಿದ್ದಾರೆ. ನ್ಯೂ ಚಂಡೀಗಢ, ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆ (ಮೊಹಾಲಿ) ನಲ್ಲಿ ‘ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ರಾಷ್ಟ್ರಕ್ಕೆ ಅರ್ಪಿಸಲಿದ್ದಾರೆ.