PM Modi : ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ , ಬೆಂ – ಮೈ ಹೈವೇ ಲೋಕಾರ್ಪಣೆ..!!
ಮೋದಿ ಭೇಟಿ ಹಿನ್ನೆಲೆ ಕೇಸರಿಮಯವಾದ ಮಂಡ್ಯ
ಸು. 16 ಸಾವಿರ ಕೋಟಿ ಮೌಲ್ಯ ಯೋಜನೆಗಳಿಗೆ ಚಾಲನೆ
ಮೈಸೂರು – ಬೆಂಗಳೂರು ಹೈವೇ ಲೋಕಾರ್ಪಣೆ
ಮಂಡ್ಯ , ಹುಬ್ಬಳ್ಳಿ – ಧಾರವಾಡಕ್ಕೆ ನಮೋ ಭೇಟಿ
ರಾಜ್ಯದಲ್ಲಿ 2023 ರ ವಿಧಾನಸಭಾ ಚುನಾವಣೆಗೆ ಈಗಾಗಲೇ ಭಾರೀ ತಯಾರಿ ನಡೆಯುತ್ತಿದ್ದು , ಇದೇ ಚುನಾವಣೆ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಬಿಜೆಪಿಯನ್ನ ಬಲಗೊಳಿಸಲು ಪ್ರಧಾನಿ ಮೋದಿ ಅವರು ರಾಜ್ಯ ಪ್ರವಾಸ ಕೈಗೊಳ್ತಿದ್ದಾರೆ.. ಕೆಲ ತಿಂಗಳುಗಳಲ್ಲಿ ಈಗಾಗಲೇ ಹಲವು ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಿ ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ..
ಇಂದು ( ಮಾರ್ಚ್ 12 ) ಕೂಡ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.. ಮಂಡ್ಯ, ಹುಬ್ಬಳ್ಳಿ, ಧಾರವಾಡ ಜಿಲ್ಲೆಗಳು ಪ್ರಧಾನಿ ಸ್ವಾಗತಕ್ಕೆ ಸಜ್ಜಾಗಿದ್ದು, ಎಲ್ಲೆಲ್ಲೂ ಕೇಸರಿಮಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು 16 ಸಾವಿರ ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ಬಹುಮುಖ್ಯವಾಗಿ ಬಹುನಿರೀಕ್ಷಿತ ಬೆಂಗಳೂರು – ಮೈ ಹೈವೇ ಲೋಕಾರ್ಪಣೆಗೊಳಿಸಲಿದ್ದಾರೆ.. ಇಂದು ಹಲವು ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಹಲವು ಪ್ರಾಜೆಕ್ಟ್‌ಗಳನ್ನು ಉದ್ಘಾಟಿಸಲಿದ್ದಾರೆ. ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯು ಬೃಹತ್ ರೋಡ್ ಶೋದಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮೈಸೂರು-ಬೆಂಗಳೂರು ದಶಪಥದಲ್ಲಿ ಸಾರ್ವಜನಿಕರ ಪ್ರಯಾಣಕ್ಕೆ ಅವಕಾಶವಿಲ್ಲ. ಸಾರ್ವಜನಿಕರು ಬದಲಿ ಮಾರ್ಗಗಳ ಮೂಲಕ ಗಮ್ಯ ತಲುಪಬಹುದು. ಇಂದು ಮೊದಲು ಮಂಡ್ಯಕ್ಕೆ ಭೇಟಿ ನೀಡಲಿರುವ ಮೋದಿ ಅವರು 5 ಸಾವಿರ ಕೋಟಿ ರೂ. ವೆಚ್ಚದ ಹಲವು ಪ್ರಾಜೆಕ್ಟ್‌ಗಳಿಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಹುಬ್ಬಳ್ಳಿಗೆ, ಅಪರಾಹ್ನ 3.15ರ ಬಳಿಕ ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ.
PM Modi : Prime Minister Narendra Modi visits the state, inaugurating the Bem-My Highway..!!
PM Modi , karnataka election 2023 , BJP , Politics