ಪ್ರಧಾನಿ ಮೋದಿ ಕೇವಲ 2 ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ: ಚಂದ್ರಕಾಂತ ಪಾಟೀಲ್
ಮುಂಬೈ: ಪ್ರಧಾನಿ ನರೇಂದ್ರ ಮೋದಿ ನಿದ್ದೆ ಮಾಡದೆ ದೇಶಕ್ಕಾಗಿ 24 ಗಂಟೆಗಳ ಕಾಲ ನಿದ್ರೆ ಮಾಡಬಹದು ಎಂದು ತೋರಿಸಿದ್ದಾರೆ ಎಂದು ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿದ್ದಾರೆ.
ಕೊಲ್ಲಾಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇವಲ 2 ಗಂಟೆ ಮಾತ್ರ ನಿದ್ದೆ ಮಾಡುತ್ತಾರೆ. ಪ್ರತಿದಿನ 22 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ನಿದ್ರೆ ಮಾಡದೇ ಇರಬಹುದಾ ಎಂಬ ಪ್ರಯೋಗವನ್ನು ಈಗ ಮಾಡುತ್ತಿದ್ದಾರೆ ಎಂದು ತಿಳಿಸಿದರು.
24 ಗಂಟೆಗಳ ಕಾಲ ಎಚ್ಚರವಾಗಿದ್ದು, ದೇಶಕ್ಕಾಗಿ ಕೆಲಸ ಮಾಡಲು ಮೋದಿ ಅವರು ನಿದ್ರೆಯನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ ಅವರು ಒಂದು ನಿಮಿಷವನ್ನೂ ವ್ಯರ್ಥ ಮಾಡುವುದಿಲ್ಲ. ಜೊತೆಗೆ ಪ್ರಧಾನಿಯವರು ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಾರೆ ಮತ್ತು ದೇಶದ ಯಾವುದೇ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳ ಬಗ್ಗೆ ತಿಳಿದಿರುತ್ತಾರೆ ಎಂದು ಹೇಳಿದರು.